Home ಬೆಂಗಳೂರು 1987ರಲ್ಲಿ ವಾಯುಪಡೆಗೆ ನೀಡಿದ್ದ 452 ಎಕರೆ ಅರಣ್ಯಭೂಮಿ ವಾಪಸ್ – ಈಶ್ವರ್ ಖಂಡ್ರೆ

1987ರಲ್ಲಿ ವಾಯುಪಡೆಗೆ ನೀಡಿದ್ದ 452 ಎಕರೆ ಅರಣ್ಯಭೂಮಿ ವಾಪಸ್ – ಈಶ್ವರ್ ಖಂಡ್ರೆ

1987ರಲ್ಲಿ ಭಾರತೀಯ ವಾಯುಪಡೆಗೆ ನೀಡಲಾಗಿದ್ದ ಈ ಭೂಮಿಯನ್ನು 2017ರಲ್ಲಿ ರದ್ದುಪಡಿಸಲಾಗಿದ್ದರೂ, ಈಗಲೂ ಜಾರಕಬಂಡೆ ಹಾಗೂ ಪೀಣ್ಯಾ ಪ್ರದೇಶ ಸೇರಿ ಒಟ್ಟು 452 ಏಕರೆಗೂ ಹೆಚ್ಚು ಅರಣ್ಯ ಭೂಮಿ ವಾಯುಪಡೆಯ ವಶದಲ್ಲೇ ಇದೆ.

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಕಾವಲ್ ಪ್ರದೇಶದಲ್ಲಿರುವ 452 ಏಕರೆ ಅರಣ್ಯ ಭೂಮಿಯನ್ನು ಭಾರತೀಯ ವಾಯುಪಡೆಯಿಂದ ಮರಳಿ ಪಡೆಯಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಗುರುವಾರ ಹೇಳಿದ್ದಾರೆ.ಈ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ಈ ಭೂಮಿಯನ್ನು ತಪ್ಪಾಗಿ ಕಂದಾಯ ಇಲಾಖೆ ಭೂಮಿಯೆಂದು ಪರಿಗಣಿಸಿ ವಾಯುಪಡೆಗೆ ನೀಡಲಾಗಿದೆ ಎಂದು ಆರೋಪಿಸಿದರು.

ಈಗ ಈ ಅರಣ್ಯ ಭೂಮಿಯನ್ನು ರಕ್ಷಿಸುವುದು ಅತ್ಯಗತ್ಯ. ಅರಣ್ಯ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅವಕಾಶ ನೀಡಬಾರದು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳೂ ಇವೆ ಎಂದು ಅವರು ಹೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು, 1987ರಲ್ಲಿ ಭಾರತೀಯ ವಾಯುಪಡೆಗೆ ನೀಡಲಾಗಿದ್ದ ಈ ಭೂಮಿಯನ್ನು 2017ರಲ್ಲಿ ರದ್ದುಪಡಿಸಲಾಗಿದ್ದರೂ, ಈಗಲೂ ಜಾರಕಬಂಡೆ ಹಾಗೂ ಪೀಣ್ಯಾ ಪ್ರದೇಶ ಸೇರಿ ಒಟ್ಟು 452 ಏಕರೆಗೂ ಹೆಚ್ಚು ಅರಣ್ಯ ಭೂಮಿ ವಾಯುಪಡೆಯ ವಶದಲ್ಲೇ ಇದೆ ಎಂದು ಹೇಳಿದರು. ಇದಲ್ಲದೆ, ಪೀಣ್ಯಾ ಪ್ಲಾಂಟೇಶನ್ ಪ್ರದೇಶದಲ್ಲಿರುವ 58.08 ಏಕರೆ ಭೂಮಿಯನ್ನು ಬಿಎಂಆರ್’ಸಿಎಲ್ ಗೆ ಹಸ್ತಾಂತರಿಸಿ ಮೆಟ್ರೋ ಯೋಜನೆ ಜಾರಿಗೆ ತಂದಿರುವುದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗಿದ್ದು, ಆ ಹಣವನ್ನು ಕೂಡ ವಾಪಸ್ ಪಡೆಯಲಾಗುತ್ತದೆ ಎಂದು ತಿಳಿಸಿದರು.

You cannot copy content of this page

Exit mobile version