Home ದೆಹಲಿ 100 ಕೋಟಿಗೂ ಅಧಿಕ ಜನರ ಮೇಲೆ ಬಾಲ್ಯದಲ್ಲಿ ಲೈಂಗಿಕ ಹಿಂಸೆ!: ಲ್ಯಾನ್ಸೆಟ್ ಅಧ್ಯಯನದಲ್ಲಿ ಬಹಿರಂಗ

100 ಕೋಟಿಗೂ ಅಧಿಕ ಜನರ ಮೇಲೆ ಬಾಲ್ಯದಲ್ಲಿ ಲೈಂಗಿಕ ಹಿಂಸೆ!: ಲ್ಯಾನ್ಸೆಟ್ ಅಧ್ಯಯನದಲ್ಲಿ ಬಹಿರಂಗ

0

ದೆಹಲಿ: ವಿಶ್ವದಾದ್ಯಂತ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ, ತಮ್ಮ ಬಾಲ್ಯದಲ್ಲಿ ಲೈಂಗಿಕ ಹಿಂಸೆಗೆ ಒಳಗಾದವರ ಸಂಖ್ಯೆ 100 ಕೋಟಿಗೂ ಹೆಚ್ಚಿದೆ.

ಆಪ್ತರಿಂದ ಹಿಂಸೆಗೆ ಒಳಗಾದ ಮಹಿಳೆಯರ ಸಂಖ್ಯೆ 60.8 ಕೋಟಿ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ, 2023 (Global Burden of Disease Study, 2023) ಅನ್ನು ವಿಶ್ಲೇಷಿಸಿ, ಲ್ಯಾನ್ಸೆಟ್ ಈ ವಿವರಗಳನ್ನು ಬಹಿರಂಗಪಡಿಸಿದೆ.

ಆಪ್ತ ಸಂಗಾತಿಯಿಂದ ಹಿಂಸೆ ಮತ್ತು ಲೈಂಗಿಕ ಹಿಂಸೆಯ ಪ್ರಕರಣಗಳು ಉಪ-ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಅತ್ಯಧಿಕವಾಗಿ ಕಂಡುಬಂದಿವೆ. ಈ ಪ್ರದೇಶಗಳಲ್ಲಿ ಇಂತಹ ಹಿಂಸೆಯ ಜೊತೆಗೆ ಎಚ್‌ಐವಿ (HIV) ಪ್ರಮಾಣವೂ ಅಧಿಕವಾಗಿದೆ.

ಭಾರತದಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ 23 ಪ್ರತಿಶತದಷ್ಟು ಜನರು ಆಪ್ತ ಸಂಗಾತಿಯಿಂದ ಹಿಂಸೆಗೆ ಒಳಗಾಗಿದ್ದಾರೆ.

You cannot copy content of this page

Exit mobile version