ಹೊಸದೆಹಲಿ: ಸಂಸದೀಯ ಸಮಿತಿಯು ಸೆಬಿ ಮುಖ್ಯಸ್ಥೆ ಮಾಧಬಿ ಬುಚ್ ಅವರಿಗೆ ಶನಿವಾರ ಸಮನ್ಸ್ ಜಾರಿ ಮಾಡಿದೆ. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸೆಬಿ ಮುಖ್ಯಸ್ಥರ ಜೊತೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ಅವರಿಗೆ ಇದೇ ತಿಂಗಳ 24ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಅವರ ಜೊತೆಗೆ ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ) ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಹ ಸಮಿತಿಯ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ.
ಮಾಧಬಿ ಇತರ ಹಲವು ಕಂಪನಿಗಳಿಂದ ಆದಾಯ ಪಡೆಯುತ್ತಿರುವುದನ್ನು ಅಮೆರಿಕದ ಸಂಶೋಧನಾ ಸಂಸ್ಥೆಯ ಹಿಂಡೆನ್ ಬರ್ಗ್ ವರದಿ ಇತ್ತೀಚೆಗೆ ಬಹಿರಂಗಪಡಿಸಿತ್ತು. ಪ್ರತಿಪಕ್ಷಗಳು ಆಗಸ್ಟ್ ತಿಂಗಳಿನಿಂದ ಈ ಆರೋಪದ ಕುರಿತು ಪ್ರತಿಪಕ್ಷಗಳು ಹೋರಾಟ ನಡೆಸುತ್ತಿವೆ. ವಿಪಕ್ಷಗಳು ಮಾಧಬಿ ಬುಚ್ ರಾಜೀನಾಮೆ ಮತ್ತು ವರದಿಯ ತನಿಖೆಗೆ ಒತ್ತಾಯಿಸುತ್ತಿವೆ.