ಪೀಪಲ್
ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.