Home Uncategorized ಕರ್ನಾಟಕದಲ್ಲಿ ಪಾಸ್ ವಿಥೌಟ್ ಹಿಂದಿ ಕಾನೂನು ತರಲೇಬೇಕು: ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ

ಕರ್ನಾಟಕದಲ್ಲಿ ಪಾಸ್ ವಿಥೌಟ್ ಹಿಂದಿ ಕಾನೂನು ತರಲೇಬೇಕು: ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ

0

ಬೆಂಗಳೂರು ಮಲ್ಲೇಶ್ವರಂ ನಲ್ಲಿರುವ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕರಿಗೆ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಮಿತಿ ಸದಸ್ಯರು ಎಚ್ಚರಿಕೆ ಪತ್ರ ನೀಡಿದ್ದಾರೆ. ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ ಎಚ್ಚರಿಕೆ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡುತ್ತೇವೆ ಅಷ್ಟರ ಒಳಗೆ ನೀವು ಲಿಖಿತವಾಗಿ ಉತ್ತರಿಸಬೇಕು. ನಮ್ಮ ಬೇಡಿಕೆ ಬಿಹಾರದಲ್ಲಿ ಪಾಸ್ ವಿಥೌಟ್ ಇಂಗ್ಲಿಷ್ ಕಾನೂನಿರುವಂತೆ ಕರ್ನಾಟಕದಲ್ಲಿ ಪಾಸ್ ವಿಥೌಟ್ ಹಿಂದಿ ಕಾನೂನು ಈ ಕೂಡಲೇ ಬರಬೇಕು ಇಲ್ಲವಾದಲ್ಲಿ 2026 ಮಾರ್ಚ್ 30ರಂದು ನಡೆಯುವ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷೆ ಕೊಠಡಿಗೆ ರಾಜ್ಯಾದ್ಯಂತ ನುಗ್ಗಿ ಹಿಂದಿ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕದಂಬ ಪಡೆಯ ಚೇತನ್ ರವರು ಮಾತನಾಡಿ ಎರಡು ನುಡಿ ನೀತಿ ಜಾರಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಮೂರು ವರ್ಷ ಕಳೆದರೂ ಜಾರಿ ಮಾಡಿಲ್ಲ ಈ ಕೂಡಲೇ ಜಾರಿ ಮಾಡದಿದ್ದರೆ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷಾ ಕೊಠಡಿಗೆ ನುಗ್ಗಿ ಉಂಟಾಗುವ ಅವಾಂತರಕ್ಕೆ ನೇರವಾಗಿ ಮುಖ್ಯಮಂತ್ರಿಯ ಸಿದ್ರಾಮಯ್ಯನವರು ಕಾರಣರಾಗುತ್ತಾರೆ ಎಂದರು.

ಪ್ರಕಾಶ್ ಹೆಬ್ಬಳ್ಳಿ, ನಾಗೇಶ್ ಅರಳಕುಪ್ಪೆ, ಮಂಜು ಗಣಪತಿಪುರ , ರಘುನಂದನ್, ಸಚಿನ್ ಮತ್ತಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

You cannot copy content of this page

Exit mobile version