ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವೆಂದು ಆರೋಪಿಸಿ ‘ಪೇ ಸಿಎಂ’ ಎಂಬ ಕ್ಯೂ ಆರ್ ಕೋಡ್ ಸಹಿತ ಇರುವ ಘೋಷಣೆಯ ಬಿತ್ತಿಪ್ರಗಳನ್ನು ಗೋಡೆಮೇಲೆ ಅಂಟಿಸುವ ಮೂಲಕ ಕಾಂಗ್ರೆಸ್ ಪಕ್ಷ ಹೊಸ ಅಭಿಯಾನ ಆರಂಭಿಸಿದೆ.
ಕರ್ನಾಟಕ ಕಾಂಗ್ರೆಸ್ ಘಟಕವು ಆಡಳಿತಾರೂಢ ಬಿಜೆಪಿ ವಿರುದ್ಧ ಹೊಸ ಅಸ್ತ್ರವನ್ನು ಮುಂದುವರೆಸಿದ್ದು, ಕರ್ನಾಟಕ ಕಾಂಗ್ರೆಸ್ ಬುಧವಾರ ಬೆಂಗಳೂರಿನಾದ್ಯಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಖಾಮುಖಿ ಮತ್ತು ಕ್ಯೂಆರ್ ಕೋಡ್‌ನೊಂದಿಗೆ “ಪೇಸಿಎಂ” ಪೋಸ್ಟರ್‌ಗಳನ್ನು ಹಾಕಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ.