Home ಅಪರಾಧ ಸಾಲದ ಹೆಸರಲ್ಲಿ ವಂಚನೆ, ಆರೋಪಿಗಳು ಸಲ್ಲಿಸಿದ್ದ ಅರ್ಜಿ – ಹೈ ಕೋರ್ಟಿನಲ್ಲಿ ವಜಾ

ಸಾಲದ ಹೆಸರಲ್ಲಿ ವಂಚನೆ, ಆರೋಪಿಗಳು ಸಲ್ಲಿಸಿದ್ದ ಅರ್ಜಿ – ಹೈ ಕೋರ್ಟಿನಲ್ಲಿ ವಜಾ

ಬೆಂಗಳೂರು : ಬ್ಯಾಂಕುಗಳಿಂದ (Banks) ಭಾರಿ ಪ್ರಮಾಣದ ಸಾಲ (Loan) ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಕಮಿಷನ್ ಪಡೆದು ವಂಚಿಸಿದ (Fraud) ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ (Highcourt) ಶಾಕ್ ಕೊಟ್ಟಿದೆ. ಸುಮಾರು 40 ಕೋಟಿ ರೂಪಾಯಿಗಳ ವಂಚನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ 11 ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಮಂಗಳೂರಿನ ದಂಪತಿಗಳಾದ ರೋಷನ್ ಸಲ್ಡಾನಾ ಮತ್ತು ಡಾಫ್ನಿ ನೀತು ಡಿಸೋಜಾ ಹಾಗೂ ಚಿತ್ರದುರ್ಗದ ಎನ್. ಚಂದ್ರಶೇಖರ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಇವರು ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗಳನ್ನು ಕೈಬಿಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ವಿಚಾರಣೆಯನ್ನು ನಡೆಸಿತು. ಸಾರ್ವಜನಿಕರೊಂದಿಗೆ ದೊಡ್ಡ ಮಟ್ಟದ ಆರ್ಥಿಕ ವ್ಯವಹಾರ ನಡೆಸಿ ವಂಚಿಸಿರುವ ಗಂಭೀರ ಆರೋಪಗಳು ಇವರ ಮೇಲಿವೆ.

ಪ್ರಸ್ತುತ ಈ ಪ್ರಕರಣವು ತನಿಖಾ ಹಂತದಲ್ಲಿದ್ದು, ಸತ್ಯಾಸತ್ಯತೆ ಹೊರಬರಲು ಪೂರ್ಣ ಪ್ರಮಾಣದ ತನಿಖೆ ಅಗತ್ಯವಾಗಿದೆ. ಕಾನೂನಿನ ನಿಯಮದಂತೆ ಇಂತಹ ಗಂಭೀರ ಅಪರಾಧಗಳ ತನಿಖೆಗೆ ನ್ಯಾಯಾಲಯವು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

You cannot copy content of this page

Exit mobile version