ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟಿವಿ, ಫ್ರಿಡ್ಜ್, ಮೊಬೈಲ್ ದರಗಳಲ್ಲಿ ಭಾರೀ ಇಳಿಕೆ ಆಗುವ ಸಂಭವವಿದೆ ಎಂದು ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಲವು ಭಾರತೀಯ ಮಾರ್ಕೆಟಿಂಗ್ ಕಂಪನಿಗಳು ಈಗಾಗಲೇ ತಮ್ಮ ಬಳಿ ಇರುವ ಎಲೆಕ್ಟ್ರಾನಿಕ್ ಗೂಡ್ಸ್ ಗಳನ್ನು ಮಾರಾಟ ಮಾಡದೇ ಹೋದರೆ ಕೆಲವೇ ದಿನಗಳಲ್ಲಿ ಕಡಿಮೆ ಆಗುವ ಎಲೆಕ್ಟ್ರಾನಿಕ್ ಗೂಡ್ಸ್ ಗಳ ಹಾವಳಿಗೆ ನಷ್ಟ ಎದುರಿಸಬೇಕಾದ ಸಂಭವ ಇದೆ ಎನ್ನಲಾಗಿದೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ 2 ರಂದು ಕಠಿಣ ಸುಂಕ ಯುದ್ಧಕ್ಕೆ ನಾಂದಿ ಹಾಡಿದ ನಂತರ, ಚೀನಾ ಅಮೆರಿಕದ ಆಮದುಗಳ ಮೇಲೆ ಶೇಕಡಾ 34 ರಷ್ಟು ಸುಂಕವನ್ನು ವಿಧಿಸಿತ್ತು. ಈಗ ಅಮೆರಿಕ ಮತ್ತು ಚೀನಾ ಅದನ್ನು ವಯಕ್ತಿಕ ಸಮರಕ್ಕೆ ಇಳಿದು ಸುಂಕ ಏರಿಕೆಯ ವ್ಯಾಪಾರ ಯುದ್ಧದಲ್ಲಿ ತೊಡಗಿವೆ.
ಚೀನಾದ ಆಮದುಗಳ ಮೇಲಿನ ಸುಂಕವನ್ನು ಶೇಕಡಾ 104 ಕ್ಕೆ ಹೆಚ್ಚಿಸಿದ ನಂತರ, ಚೀನಾ ಯುಎಸ್ ಆಮದುಗಳ ಮೇಲಿನ ಸುಂಕವನ್ನು ಶೇಕಡಾ 84 ಕ್ಕೆ ಹೆಚ್ಚಿಸಲು ಕಾರಣವಾಗಿದೆ. ಆದರೆ ಅಮೇರಿಕಾ ಮತ್ತು ಚೀನಾ ದೇಶಗಳ ಈ ಸುಂಕ ಯುದ್ಧ, ಭಾರತ ಎಂಬ ಕೂಸಿಗೆ ವರದಾನ ಆಗಲಿದೆ ಎಂದು ಭಾರತದ ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅಮೇರಿಕಾ ಸೇರಿದಂತೆ ಬೇರೆ ಯಾವುದೇ ಸುಂಕ ಏರಿಕೆಯ ಹೊರೆಗೆ ತಲೆ ಕೆಡಿಸಿಕೊಳ್ಳದ ಭಾರತ ತಟಸ್ಥ ನಿಲುವಿಗೆ ಮುಂದಾಗಿದೆ. ಪರಿಣಾಮ ಈಗ ಚೀನಾ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಅತಿ ಕಡಿಮೆ ದರದಲ್ಲಿ ಉತ್ಪನ್ನಗಳು ಸಿಗಲಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಹೆಚ್ಚಿನ ಸುಂಕಗಳಿಂದಾಗಿ, ಅಮೆರಿಕದಲ್ಲಿ ಚೀನಾದ ಆಮದುಗಳ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಬಹುದು. ಇದರಿಂದಾಗಿ ಚೀನಾದ ಘಟಕ ತಯಾರಕರು ಒತ್ತಡಕ್ಕೆ ಒಳಗಾಗಬಹುದು. ಅಮೆರಿಕದಿಂದ ಆದೇಶಗಳು ನಿಧಾನವಾಗುತ್ತಿದ್ದಂತೆ ಭಾರತೀಯ ಸಂಸ್ಥೆಗಳು ಆಮದು ಬೆಲೆಗಳ ಬಗ್ಗೆ ಮರು ಮಾತುಕತೆ ನಡೆಸಲು ಇದು ಅವಕಾಶ ನೀಡುತ್ತದೆ ಎಂದು ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್‌ನ ಉಪಕರಣ ವ್ಯವಹಾರದ ಮುಖ್ಯಸ್ಥ ಕಮಲ್ ನಂದಿ ಪ್ರಕಟಣೆಗೆ ತಿಳಿಸಿದ್ದಾರೆ.
ಎರಡು-ಮೂರು ತಿಂಗಳ ಕಚ್ಚಾ ವಸ್ತುಗಳ ದಾಸ್ತಾನು ಚಕ್ರದ ಪ್ರಕಾರ, ಕಂಪನಿಗಳು ಮೇ-ಜೂನ್‌ನಿಂದ ಹೊಸ ಆದೇಶಗಳನ್ನು ನೀಡಲಿವೆ ಎಂದು ವರದಿ ತಿಳಿಸಿದೆ.
ಅಮೆರಿಕದ ರಫ್ತು ಕುಸಿತದಿಂದಾಗಿ ಚೀನಾದ ಕಂಪನಿಗಳೊಂದಿಗೆ ಅತಿಯಾದ ಪೂರೈಕೆ ಭೀತಿಗೆ ಕಾರಣವಾಗಿದೆ ಎಂದು ದೂರದರ್ಶನ ಒಪ್ಪಂದ ತಯಾರಕ ಸೂಪರ್ ಪ್ಲಾಸ್ಟ್ರಾನಿಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅವ್ನೀತ್ ಸಿಂಗ್ ಮಾರ್ವಾ ಹೇಳಿದ್ದಾರೆ. ಅಂತಹ ಸಂದರ್ಭಗಳ ನಡುವೆ ಭಾರತೀಯ ಕಂಪನಿಗಳು ಬೆಲೆಗಳ ಬಗ್ಗೆ ಮರು ಮಾತುಕತೆ ನಡೆಸುತ್ತಿರುವುದರಿಂದ, ಕೆಲವು ಕಡಿಮೆ ಬೆಲೆಗಳನ್ನು ಗ್ರಾಹಕರಿಗೆ ರಿಯಾಯಿತಿಗಳಾಗಿ ವರ್ಗಾಯಿಸಲಾಗುತ್ತದೆ ಎಂದು ಅವರು ಮತ್ತಷ್ಟು ಉಲ್ಲೇಖಿಸಿದ್ದಾರೆ.