Home ದೇಶ ಡಿಡಿ ನ್ಯೂಸ್ ಲೋಗೋ ಕೇಸರಿ ಬಣ್ಣಕ್ಕೆ ಬದಲು. ಪ್ರಸಾರ ಭಾರತಿ ಈಗ ಬಿಜೆಪಿಯ ಪ್ರಚಾರ ಭಾರತಿ...

ಡಿಡಿ ನ್ಯೂಸ್ ಲೋಗೋ ಕೇಸರಿ ಬಣ್ಣಕ್ಕೆ ಬದಲು. ಪ್ರಸಾರ ಭಾರತಿ ಈಗ ಬಿಜೆಪಿಯ ಪ್ರಚಾರ ಭಾರತಿ ಎಂದ ಮಾಜಿ ಸಿಇಒ!

0

ನವದೆಹಲಿ: ಭಾರತ ಸರ್ಕಾರದ ರಾಷ್ಟ್ರೀಯ ದೂರದರ್ಶನ ಚಾನೆಲ್ ದೂರದರ್ಶನ ಕೇಂದ್ರ ಸರ್ಕಾರಕ್ಕೆ ಸ್ವಾಮಿ ಭಕ್ತಿಯನ್ನು ತೋರಿಸಿದೆ. ಸುದ್ದಿ ವಾಹಿನಿ ದೂರದರ್ಶನ ತನ್ನ ನಿಷ್ಠೆಯನ್ನು ತೋರಿಸಲು ತನ್ನ ಲೋಗೋ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ.

ಆಡಳಿತಾರೂಢ ಬಿಜೆಪಿ ಡಿಡಿ ನ್ಯೂಸ್‌ ಲೋಗೋ ಕಲರ್‌ ಬದಲಾಯಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ‘‘ಬಹಳ ಇತಿಹಾಸ ಹೊಂದಿರುವ ಡಿಡಿ ನ್ಯೂಸ್ ಲೋಗೋ ಕಿತ್ತಳೆ ಬಣ್ಣಕ್ಕೆ ಬದಲಾಗಿದೆ. ಈ ಹಿಂದೆ ದೂರದರ್ಶನದ ಸಿಇಒ ಆಗಿ ಕೆಲಸ ಮಾಡಿದ್ದ ಟಿಎಂಸಿ ಸಂಸದ ಜವಾಹರ್ ಸರ್ಕಾರ್, ಇದು ಪ್ರಸಾರ ಭಾರತಿಯೇ ಹೊರತು ಪ್ರಚಾರ ಭಾರತಿ ಅಲ್ಲ ಎಂದು ಟೀಕಿಸಿದ್ದಾರೆ. ದೂರದರ್ಶನದ ಈ ಕ್ರಮವು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಟುವಾಗಿ ಟೀಕಿಸಿದ್ದಾರೆ.

You cannot copy content of this page

Exit mobile version