Home ದೆಹಲಿ ಪ್ರಧಾನಿ ಮೋದಿಯವರೆ ನಿಮ್ಮ ಸ್ಕಿನ್‌ಕೇರ್ ಸೀಕ್ರೆಟ್ ತಿಳಿಸಿ – ಟಿಎಂಸಿ ಸಂಸದೆ ಮೊಯಿತ್ರಾ

ಪ್ರಧಾನಿ ಮೋದಿಯವರೆ ನಿಮ್ಮ ಸ್ಕಿನ್‌ಕೇರ್ ಸೀಕ್ರೆಟ್ ತಿಳಿಸಿ – ಟಿಎಂಸಿ ಸಂಸದೆ ಮೊಯಿತ್ರಾ

0

ನವದೆಹಲಿ : ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಹಾಸ್ಯಭರಿತ ರೀತಿಯಲ್ಲಿ ವಾಗ್ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮಹುವಾ ಮೊಯಿತ್ರಾ ಅವರು ಪ್ರಧಾನಿ ಮೋದಿಯವರ ವಿರುದ್ಧ ಈ ಲಘು ಹಾಸ್ಯದ ಟೀಕೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಮೋದಿ ಜಿ, ಜಿಡಿಪಿ ಬೆಳವಣಿಗೆಯ ವಿಷಯವನ್ನು ಕೊಂಚ ಬದಿಗೆ ಇಡಿ… ಮೊದಲು ನಿಮ್ಮ ಹೊಳೆಯುವ ಚರ್ಮದ ರಹಸ್ಯವೇನು ಎಂಬುದನ್ನು ತಿಳಿಸಿ” ಎಂದು ಚಟಾಕಿ ಹಾರಿಸಿದರು. ಪ್ರಧಾನಿಯವರು ತಮ್ಮ ದಿನನಿತ್ಯದ ಸ್ಕಿನ್‌ಕೇರ್ ಅಥವಾ ತ್ವಚೆಯ ರಕ್ಷಣೆಯ ರಹಸ್ಯವನ್ನು ಹಂಚಿಕೊಳ್ಳಬೇಕು ಎಂದು ಅವರು ತಮಾಷೆಯಾಗಿ ಕೇಳಿಕೊಂಡಿದ್ದಾರೆ. ಪ್ರಸ್ತುತ ಮಹುವಾ ಮೊಯಿತ್ರಾ ಅವರ ಈ ಮಾತುಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವೈವಿಧ್ಯಮಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

You cannot copy content of this page

Exit mobile version