ಲಖನೌ: ಭಾರತೀಯ ಸಂವಿಧಾನ ಮತ್ತು ಹಿಂದೂ ಸಂಹಿತೆಯನ್ನು ಓದಿದರೆ ಮಹಿಳೆಯರ ಜೀವನ ಗುಲಾಮಗಿರಿ ಮತ್ತು ಭಯದಿಂದ ಮುಕ್ತವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಕ್ಕೆ ವಾರಾಣಾಸಿಯ ಮಹತ್ಮಾ ಗಾಂಧಿ ಕಾಶಿ ವಿಧ್ಯಾಪೀಠದ ದಲಿತ ಅತಿಥಿ ಉಪನ್ಯಾಸಕರನ್ನು ವಿಶ್ವವಿದ್ಯಾಲಯದಿಂದ ತೆಗೆದುಹಾಕಲಾಗಿದೆ.
ಈ ಹಿನ್ನಲೆ ಟ್ವೀಟ್ ಮಾಡಿರುವ ವ್ಯಕ್ತಿ ರಾಜ್ಯಶಾಸ್ತ್ರ ವಿಭಾಗದ ಮಿಥಿಲೇಶ್ ಕುಮಾರ್ ಗೌತಮ್ ಎಂದು ತಿಳಿದುಬಂದಿದೆ.
ಮಹಿಳೆಯರು ನವರಾತ್ರಿಯಲ್ಲಿ ಒಂಬತ್ತು ದಿನ ಉಪವಾಸ ಮಾಡುವುದಕ್ಕಿಂತ, ಒಂಬತ್ತು ದಿನ ಭಾರತೀಯ ಸಂವಿಧಾನ ಮತ್ತು ಹಿಂದೂ ಕೋಡ್ ಬಿಲ್ ಓದುವುದರಿಂದ ಅವರ ಜೀವನ ಗುಲಾಮಗಿರಿ ಮತ್ತು ಭಯದಿಂದ ವಿಮೋಚನೆಗೊಳ್ಳುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಮಿಥಿಲೇಶ್ ಕುಮಾರ್ ಗೌತಮ್ ಅವರು ಮಹಿಳೆಯರಿಗೆ ಸಲಹೆ ನೀಡಿದ್ದರು.
ಈ ಟ್ವೀಟ್ ಮಾಡಿರುವುದಕ್ಕೆ ಮಹಾತ್ಮಾ ಗಾಂಧಿ ವಿಧ್ಯಾಪೀಠವು ಮಿಥಿಲೇಶ್ ಕುಮಾರ್ ಗೌತಮ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ.