Home ಬ್ರೇಕಿಂಗ್ ಸುದ್ದಿ ಹಾಸನಾಂಬ ಜಾತ್ರೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ, ಗೋಲ್ಡನ್ ಪಾಸ್ ಅವ್ಯವಹಾರ -ಜಿ. ದೇವರಾಜೇಗೌಡ

ಹಾಸನಾಂಬ ಜಾತ್ರೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ, ಗೋಲ್ಡನ್ ಪಾಸ್ ಅವ್ಯವಹಾರ -ಜಿ. ದೇವರಾಜೇಗೌಡ

ಹಾಸನ : ಹಾಸನಾಂಬ ಉತ್ಸವದ ವೇಳೆ ನಡೆದಿರುವ ಪ್ರೋಟೋಕಾಲ್ ಉಲ್ಲಂಘನೆ ಹಾಗೂ ಗೋಲ್ಡನ್ ಪಾಸ್ ಅವ್ಯವಹಾರದ ವಿರುದ್ಧ ತಾವು ಕಾನೂನು ಹೋರಾಟ ಆರಂಭಿಸುವುದಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ಸವದ ಸಮಯದಲ್ಲಿ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಪ್ರಥಮ್ ಗೆ ಜಿಲ್ಲಾಡಳಿತದಿಂದ ಗೌರವ ಕೊಡುತ್ತಾರೆ. ಆದರೇ ನಿನ್ನೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೇವಾಲಯಕ್ಕೆ ಬಂದಾಗ ಅವರಿಗೆ ಅಪಮಾನಕಾರಿ ವರ್ತನೆ ನಡೆದಿದೆ. ಜಿಲ್ಲಾಡಳಿತದಿಂದ ಸ್ಪಷ್ಟವಾದ ಪ್ರೋಟೋಕಾಲ್ ಲೋಪಗಳು ನಡೆದಿವೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದರು. ಗೋಲ್ಡನ್ ಪಾಸ್ ಹಂಚಿಕೆ ವಿಚಾರದಲ್ಲಿಯೂ ಅಧಿಕಾರಿಗಳು ತಮ್ಮ ಇಷ್ಟದ ಜನರಿಗೆ ಪಾಸ್‌ಗಳನ್ನು ನೀಡಿರುವ ಕುರಿತು ಕೆಳಮಟ್ಟದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ದೇವರಾಜೇಗೌಡ ಆರೋಪಿಸಿದರು. ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಮಗೆ ಬೇಕಾದವರಿಗೆ ಪಾಸ್ ನೀಡಲು ಸೂಚನೆ ನೀಡಿದ್ದಾರೆ ಎಂದು ದೂರಿದರು. ಇದೇ ವೇಳೆ ಅಧಿಕಾರಿಗಳು ಹಾಸನಾಂಬ ಉತ್ಸವವನ್ನು ವೈಯಕ್ತಿಕ ಪ್ರಚಾರದ ವೇದಿಕೆಯಾಗಿ ಬಳಸುತ್ತಿರುವುದಾಗಿ ದೇವರಾಜೇಗೌಡ ಟೀಕಿಸಿದರು. “ಮಹತ್ವದ ಮಾಧ್ಯಮಗಳನ್ನು ಕಡೆಗಣಿಸಿ ತಮ್ಮದೇ ಸೋಶಿಯಲ್ ಮೀಡಿಯಾದಲ್ಲಿ ವೈಭವದ ಪ್ರಚಾರ ನಡೆಸುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡುತ್ತಾ ಅನಗತ್ಯ ಖರ್ಚುಗಳನ್ನು ಮಾಡಿದ್ದಾರೆ,” ಎಂದರು. ಸರ್ಕಾರದ ಹಣ ಹಾಗೂ ದೇವಾಲಯದ ನಿಧಿಯ ದುರುಪಯೋಗ, ಪ್ರೋಟೋಕಾಲ್ ಉಲ್ಲಂಘನೆ, ರಾಜಕೀಯ ಪಕ್ಷದ ನಾಯಕರ ಕಡೆಗಣನೆ ಇವೆಲ್ಲಕ್ಕೂ ಕಾನೂನಿನ ಹಾದಿಯಲ್ಲಿ ಉತ್ತರ ನೀಡುವೆ ಎಂದು ಎಚ್ಚರಿಕೆ ನೀಡಿದರು. ಇನ್ನು ಸಾಲು ಮರದ ತಿಮ್ಮಕ್ಕ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ದೇವಾಲಯಕ್ಕೆ ಬಂದಾಗ ಎರಡು ಗಂಟೆಗಳ ಕಾಲ ಹೊರಗೆ ನಿಲ್ಲಿಸಿದ್ದಾರೆ. ಕೆಳ ಮಟ್ಟದ ರಾಜಕೀಯ ಮಾಡಿದ್ದು, ಕೃಷ್ಣಬೈರೇಗೌಡರು ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಿರುವುದನ್ನು ಹೊಡೆದು ಹಾಕಿದ್ದೀರಿ! ನೀವು ಪ್ರಚಾರಕ್ಕಾಗಿ ಮಾಡಿದ ದುರಂತ ಭಕ್ತಾಧಿಗಳು ೮ ರಿಂದ ೧೦ ಕಿ.ಮಿ ನಿಲ್ಲಬೇಕಾಯಿತು ಎಂದು ಬೇಸರವ್ಯಕ್ತಪಡಿಸಿದರು.

You cannot copy content of this page

Exit mobile version