Home ದೇಶ ಮತಗಳ್ಳತನದ ಆರೋಪ ; ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್ ಬಂದ್ ; ಚುನಾವಣಾ ಆಯೋಗಕ್ಕೆ...

ಮತಗಳ್ಳತನದ ಆರೋಪ ; ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್ ಬಂದ್ ; ಚುನಾವಣಾ ಆಯೋಗಕ್ಕೆ ತಟ್ಟಿದ ಬಿಸಿ

0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ಲೋಪಗಳು ಮತ್ತು ಮತಗಳ್ಳತನದ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಂತೆ ಹಲವು ರಾಜ್ಯದಲ್ಲಿನ ಚುನಾವಣಾ ಆಯೋಗದ ವೆಬ್‌ಸೈಟ್‌ ಬಂದ್ ಆಗಿವೆ. ಈ ಬಗ್ಗೆ ಚುನಾವಣಾ ಆಯೋಗದ ಸೇವೆಯಲ್ಲಿ ಕಂಡ ಲೋಪಗಳನ್ನು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡು ತೀವ್ರವಾಗಿ ಟೀಕಿಸಿದ್ದಾರೆ.

ದೇಶದ ಮೂಲೆ ಮೂಲೆಗಳಲ್ಲಿರುವ ಹೆಚ್ಚಿನ ಮತಗಟ್ಟೆಗಳಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ, ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ಅದರ ಜೊತೆ ಸೇರಿಕೊಂಡಿದೆ ಎಂದು ರಾಹುಲ್ ಗಾಂಧಿ ಸಾಕ್ಷಿ ಸಮೇತ ಗುರುವಾರ ಬಯಲು ಮಾಡಿದ ಬೆನ್ನಲ್ಲೇ ಈಗ ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ.

ಈಗಾಗಲೇ ಪರಿಶೀಲಿಸಿದಂತೆ ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿನ ಚುನಾವಣಾ ಆಯೋಗದ ವೆಬ್‌ಸೈಟ್‌ನ ಇ–ವೋಟರ್‌ ಪಟ್ಟಿ ಓಪನ್‌ ಆಗುತ್ತಿಲ್ಲ. ರಾಹುಲ್ ಗಾಂಧಿ ಆರೋಪದಂತೆ ಈಗ ಚುನಾವಣಾ ಆಯೋಗ ವೆಬ್ಸೈಟ್ ಸ್ಥಗಿತಗೊಳಿಸಿರುವುದು ಹಲವಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಸಾಕಷ್ಟು ನೆಟ್ಟಿಗರು ಹಂಚಿಕೊಂಡು ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ.

https://twitter.com/PratyushaBJP/status/1953682207966736443?t=hJjtJXsdY2OcYF434mRn-g&s=19
https://twitter.com/Samriddhi177/status/1953743050515394989?t=r31JjxFmk31JwLeGcsXKJg&s=19
https://twitter.com/mohitlaws/status/1953696274617970974?t=jPZDJYbrXC7t-5JcpxjOUA&s=19

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ ರಾಹುಲ್‌ ಗಾಂಧಿ, ‘ಚುನಾವಣಾ ಆಯೋಗ ನನ್ನಿಂದ ಅಫಿಡವಿಟ್ ಕೇಳುತ್ತಿದೆ. ಪ್ರಮಾಣ ಮಾಡುವಂತೆ ಹೇಳುತ್ತಿದೆ. ನಾನು ಹೇಳಿದ್ದೆಲ್ಲವೂ ಸತ್ಯವೆಂದು ಸಂಸತ್ತಿನಲ್ಲೇ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಜೊತೆಗೆ ದೇಶದ ಜನರು ನಮ್ಮ ದಾಖಲೆಗಳನ್ನಿಟ್ಟುಕೊಂಡು ಚುನಾವಣಾ ಆಯೋಗವನ್ನು ಪ್ರಶ್ನಿಸಲಾರಂಭಿಸುತ್ತಿದ್ದಂತೆ ವೆಬ್‌ಸೈಟ್‌ ಅನ್ನು ಬಂದ್‌ ಮಾಡಲಾಗಿದೆ. ಜನರು ಪ್ರಶ್ನಿಸಲು ಆರಂಭಿಸಿದರೆ ಅವರ ನಾಟಕ ಬಯಲಾಗುತ್ತದೆ ಎಂಬ ಭಯ ಆಯೋಗವನ್ನು ಆವರಿಸಿದೆ’ ಎಂದು ಹೇಳಿದ್ದಾರೆ.

You cannot copy content of this page

Exit mobile version