ಒಂದು ಕಡೆ ಕಾಂತಾರಾ ಸಿನಿಮಾ ರಾಜ್ಯದಾದ್ಯಂತ ಭಾರೀ ಯಶಸ್ಸು ಗಳಿಸುತ್ತಿರುವಾಗಲೇ ಅದರ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿಯವರ “ನೊ ಕಮೆಂಟ್” ಒಂದು ರಾಹುಲ್ ಗಾಂಧಿಯವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ.
ಆದದ್ದಿಷ್ಟು. ಸುದ್ದಿವಾಹಿನಿಯೊಂದು ಕಾಂತಾರಾ ನಿರ್ದೇಶಕ ರಿಷಬ್ ಶೆಟ್ಟಿಯವರ ಸಂದರ್ಶನ ನಡೆಸುತ್ತಿದ್ದ ಸಂದರ್ಭ. ಸಂದರ್ಶಕಿ ಚುಟುಕು ಪ್ರಶ್ನೆ ಕೇಳುವ ಸಂದರ್ಭದಲ್ಲಿ ಮಾತುಕತೆ ಹೀಗೆ ನಡೆಯುತ್ತದೆ.
ಸಂದರ್ಶಕಿ- ಪ್ರಧಾನಿ ನರೇಂದ್ರ ಮೋದಿ?
ರಿಷಬ್ ಶೆಟ್ಟಿ- ಅದ್ಭುತ ನಾಯಕ.
ಸಂದರ್ಶಕಿ- ರಾಹುಲ್ ಗಾಂಧಿ?
ರಿಷಬ್ ಶೆಟ್ಟಿ – ನೊ ಕಮೆಂಟ್ಸ್
ರಿಷಬ್ ಶೆಟ್ಟಿ ನರೇಂದ್ರ ಮೋದಿಯವರನ್ನು ಹೊಗಳಿ ರಾಹುಲ್ ಗಾಂಧಿ ಕುರಿತು ʼನೊ ಕಮೆಂಟ್ಸ್ʼ ಎಂದು ಹೇಳಿದ ಈ ಸಂದರ್ಶನದ ಚುಟುಕು ವಿಡಿಯೋ ವೈರಲ್ ಆಗುತ್ತಿದ್ದಂತೆ… ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ ಅಭಿಮಾನಿಗಳು, ʼರಿಷಬ್ ಶೆಟ್ಟಿ ತಮ್ಮ ಬುದ್ಧಿ ತೋರಿಸಿಯೇ ಬಿಟ್ಟರುʼ ಎಂದು ಟೀಕಿಸಿದ್ದಾರೆ.
ರಿಷಬ್ ಶೆಟ್ಟಿ ಹೇಳಿಕೆ ಕುರಿತಾದ ಕೆಲವು ಅಭಿಪ್ರಾಯಗಳು ಹೀಗಿವೆ:
ರೋಶನ್ ಶೆಟ್ಟಿ ಆರ್ ಜಿ ಎಂಬುವವರು ಕಾಂತಾರಾ ಸಿನಿಮಾದ ಪೋಸ್ಟರ್ ಜೊತೆಗೆ ಹಾಕಿರುವ ಪೋಸ್ಟಿನಲ್ಲಿ, “#ಕಾಂತಾರ ಗೆದ್ದಿದ್ದು ಉತ್ತಮ ನಟನೆ, ಧರ್ಮದ ಮೇಲಿನ ನಂಬಿಕೆ ಹಾಗೂ ಆರಾಧ್ಯ ದೈವ “ಪಂಜುರ್ಲಿ ” ಆಶೀರ್ವಾದದಿಂದ.
“ಬಕೆಟ್” ಹಿಡಿಯುವುದರಿಂದ ಸ್ವಾರ್ಥ ಸಾಧನೆ ಮಾಡಬಹುದೇ ವಿನಃ ಅಭಿಮಾನಿಗಳ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ದಯವಿಟ್ಟು ಕಲೆಯನ್ನು ರಾಜಕೀಯದೊಂದಿಗೆ ವಿಲೀನಗೊಳಿಸಬೇಡಿ ರಿಷಬ್ ಶೆಟ್ಟಿ, ನೀನು ಇನ್ನೊಂದು ಜನ್ಮ ಹೆತ್ತು ಬಂದ್ರು!
ರಾಹುಲ್ ಗಾಂಧಿ ನ ವ್ಯಕ್ತಿತ್ವಕ್ಕೆ ಮಸಿಬಡಿಯಲು ಸಾಧ್ಯವಿಲ್ಲ.” ಎಂದು ಟೀಕಿಸಿದ್ದಾರೆ.
ಈ ಪೋಸ್ಟಿಗೆ ಕಮೆಂಟ್ ಮಾಡಿರುವ, ಉದಯ್ ಶೆಟ್ಟಿ ಎಂಬುವವರು “ಯಶಸ್ಸನ್ನು balance ಮಾಡುವಲ್ಲಿ ರಿಷಭ್ ಎಡವುತ್ತಿದ್ದಾರೆ ಅನಿಸುತ್ತೆ. ರಾಹುಲ್ ಬಗೆಗಿನ ರಿಷಭ್ ಅಭಿಪ್ರಾಯ upto him. ಆದರೆ ರಿಷಭ್ ಮೋದಿ ಬಗೆಗೇನಾದರೂ no comments ಅಂದಿದ್ರೆ ಸ್ವತಃ ರಿಷಭ್ ‘ಕಾಂತಾರ’ ಸೇರಬೇಕಾಗುತ್ತಿತ್ತು. ರಿಷಭ್ ಜಾಣ. He is a good salesman.” ಎಂದು ಕಮೆಂಟಿಸಿದ್ದಾರೆ.
ರಮೇಶ್ ಶೆಟ್ಟಿ ಎಂಬುವವರು ರಿಷಬ್ ಶೆಟ್ಟಿಯವರನ್ನು ಟೀಕಿಸಿ, “ಇವನಿಗೆ ಹಿನ್ನೆಲೆಯಲ್ಲಿ ವಿದೇಶಿ ಸಂಗೀತ ಸಿಸ್ಟಮ್ ಬೇಕು, ಇವನ ಮಕ್ಕಳನ್ನು ಇವನು ಗುರುಕುಲ ಮಾಧ್ಯಮದಲ್ಲಿ ಬೆಳೆಸಲಿ, ಬೆಂಗಳೂರಿನ ಕಾನ್ವೆಂಟ್ ಗೆ ಸೇರಿಸಿದ್ದಾನೆ.
ಕರಾವಳಿಯಲ್ಲಿ ಕೋಮು ವಿಷದ ಜನರಿಂದ ಬೆಂಬಲ ಪಡೆಯುವ ತೆವಲು ಇವನಿಗೆ.
ಇವನು ಈ ಸಿನೆಮಾದಿಂದ ಜನರಿಗೆ ಯಾವ ಸಂದೇಶ ಕೊಟ್ಟಿದ್ದಾನೆ, ??
ಮೊದಲೇ ಮೂಢ ನಂಬಿಕೆಗಳಿಗೆ ದಾಸರಾಗಿ ತಮ್ಮ ದುಡಿಮೆಯನ್ನು ವ್ಯಯ ಮಾಡುತ್ತಿರುವ, ಅದಕ್ಕಾಗಿ ಬ್ಯಾಂಕ್, ಸ್ವಸಹಾಯ ಸಂಘಗಳಲ್ಲಿ ಮೈ ತುಂಬಾ ಸಾಲ ಮಾಡಿಕೊಂಡಿರುವ ಸಾಮಾನ್ಯ ಜನರನ್ನು ಪುನಃ ಮೂಢನಂಬಿಕೆಗಳಿಗೆ ತಳ್ಳುವ ಪ್ರಯತ್ನ ತನ್ನ ಹಣದಾಹಕ್ಕಾಗಿ ಮಾಡುತ್ತಿದ್ದಾನೆ…
ಸಾಮಾಜಿಕ ಕಳಕಳಿ ಇಲ್ಲದ , ಹಣದಾಹಿ ರಿಷಬ್..” ಎಂದು ಕಿಡಿಕಾರಿದ್ದಾರೆ.
ಬಾಲಕೃಷ್ಣ ಕೋಟ್ಯಾನ್ ಎಂಬುವವರು, “ರಿಷಬ್ ಶೆಟ್ರೆ…. ರಾಹುಲ್ ಗಾಂಧಿಯವರ ವ್ಯಕ್ತಿತ್ವದ ಸರ್ಟಿಫಿಕೇಟಿನ ಅವಶ್ಯಕತೆ ನಿಮ್ಮಿಂದ ಬೇಡ….. ನೀವು ಬಕೆಟ್ ಹಿಡಿದು ಇನ್ನೊಬ್ಬರನ್ನು ಸಂತೋಷ ಪಡಿಸಲು ರಾಹುಲ್ ಗಾಂಧಿಯವರನ್ನು ಬಳಸುವ ಅಗತ್ಯವೂ ಇಲ್ಲ…” ಎಂದಿದ್ದಾರೆ.
ಫೇಸ್ಬುಕ್ ಮಟ್ಟಿಗೆ ಸೆಲೆಬ್ರಿಟಿ ಬರಹಗಾರರಾದ ನಾಗೇಗೌಡ ಕೀಲಾರ ಅವರು “ಆ ಬ್ಯಾವರ್ಸಿ ನೊ ಕಮೆಂಟ್ಸ ಅಂದಿದ್ದು ನೋಡಿದಿರ ಫ್ರೆಂಡ್ಸ್” ಎಂದು ವ್ಯಂಗ್ಯವಾಗಿ ಹಾಕಿರುವ ಪೋಸ್ಟಿಗೆ ಬಹಳ ಜನರು ಕಮೆಂಟು ಮಾಡಿ ರಿಷಬ್ ಅವರನ್ನು ಟೀಕಿಸಿದ್ದಾರೆ. ಅದರ ಕೆಲವು ಸ್ಯಾಂಪಲ್ ಇಲ್ಲಿವೆ.
ಕರಾವಳಿಯ ಎಡಪಂಥೀಯ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು ಈ ಕುರಿತು ವಿಡಂಬನಾತ್ಮಕವಾಗಿ ಬರೆದಿರುವ ಪ್ರತಿಕ್ರಿಯೆ ಹೀಗಿದೆ- “ಮೋದಿ “ಅತ್ಯದ್ಭುತ ನಾಯಕ” ಅಂತಾದರೆ ರಾಹಲ್ “ಪಪ್ಪು” ಆಗಲೇಬೇಕು.
ಅದ್ಯಾಕೆ ನೋ ಕಮೆಂಟ್ಸ್ ಅಂದದ್ದು !. ಕಾಂಗ್ರೆಸ್ ನವರ ಕುರಿತು ಅಷ್ಟು ಹೆದರಿಕೆಯಾ ? ರಾಹುಲ್ ಪ್ರಧಾನಿ ಆದರೆ ಈಡಿ, ಐಟಿ ಎಲ್ಲಾ ಚೂ ಬಿಡಬಹುದು ಎಂಬ ಭಯವಾ ? ಎಂತದು ರಿಷಭ್ ಶೆಟ್ರೆ ? ತುಳುವರ ಮರ್ಯಾದೆ ತೆಗೆಯುವುದಾ? ಇಷ್ಟು ಹೆದರಿದರೆ ಹೇಗೆ ?
ಕಾಂಗ್ರೆಸ್ ಪಕ್ಷದ ಐಟಿ ವಿಭಾಗದಲ್ಲಿರುವ ಜ್ಞಾನಿ ತಾವರೆಕೆರೆ, “ಆ ಸಿನಿಮಾದ ಬಗ್ಗೆ ನಾನು ಯಾವುದೇ ಪೋಸ್ಟ್ ಹಾಕಿರಲಿಲ್ಲ, ಆತ ಭಕ್ತ ಎಂದು ಮೊದಲೇ ಗೊತ್ತಿದ್ದ ವಿಚಾರ. ನಿಮಗೆ ಒಂದು ಘಟನೆ ನೆನಪಿನ ಬುತ್ತಿಯಿಂದ ಜಾರಿರಬಹುದು, ಮಂಡ್ಯದ ಸೈನಿಕರೊಬ್ಬರು ಹುತಾತ್ಮರಾದಾಗ ಈ ಆಸಾಮಿ ಏನು ಮಾತನಾಡಿದ್ದ ಅಂತ ಒಮ್ಮೆ ನೆನಪಿಸಿಕೊಳ್ಳಿ. ಆತ ಹಾರ್ಡ್ ಕೋರ್ ಭಕ್ತ, ಸಂಸ್ಕೃತಿ ಮಣ್ಣಾಂಗಟ್ಟಿ ಯಾವುದು ಇಲ್ಲ ಅವರಿಗೆ, ಸಿನಿಮಾದ ಬಗ್ಗೆ ಒಳ್ಳೆಯ ವ್ಯಾಪಾರಿ ಬುದ್ದಿಯಿದೆ ಅಷ್ಟೇ. ಮುಂದೊಂದು ದಿನ ಸಿನಿಮಾದಿಂದ ಮಾಡಿದ ಹಣದಲ್ಲಿ ಆ ಆಸಾಮಿ ಬಿಜೆಪಿಯಿಂದ ಚುನಾವಣೆಗೆ ನಿಂತರೂ ಆಶ್ಚರ್ಯ ಪಡಬೇಕಿಲ್ಲ” ಎಂದು ನಾಲ್ಕು ವರ್ಷಗಳ ಹಿಂದೆ ರಿಷಬ್ ಶೆಟ್ಟಿ ಬುದ್ದಿಜೀವಿಗಳ ಕುರಿತು ಮಾಡಿದ್ದ ಟೀಕೆಯನ್ನು ನೆನಪಿಸಿಕೊಂಡು ಹೀಗೆ ಬರೆದ್ದಾರೆ, “ಕೆಲವರಿಗೆ ನೆನಪಿನ ಶಕ್ತಿ ಕಡಿಮೆ, ಆದರೆ ಆಗಲೇ ಇದರ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಇವರುಗಳ ಹುಚ್ಚುತನ ದಿನದಿಂದ ಹೆಚ್ಚಾಗುತ್ತಲೇ ಹೋಗುತ್ತದೆ ಹೊರತು ಕಡಿಮೆಯಂತೂ ಆಗಲ್ಲ. ನನ್ನ ಹಣ ನನ್ನಿಷ್ಟ, ನಾನು ಯಾರ ಸಿನಿಮಾ ಥಿಯೇಟರ್ ಹೋಗಿ ನೋಡಬೇಕೆಂಬುದು ಕೂಡ ನನ್ನದೇ ಇಷ್ಟ.
‘ನೋ ಕಾಮೆಂಟ್ಸ್’ ಎಂದಿದ್ದಾರೆ.
ಕಾಂಗ್ರೆಸ್ ಬೆಂಬಲಿಗರೂ ವಕೀಲರೂ ಆದ ಶೈಲಜಾ ಅಮರನಾಥ್ ಅವರು ಕೆಳಗಿನಂತೆ ಕಿಡಿ ಕಾರಿದ್ದಾರೆ.
ಲೇಖಕಿ ಸಿಹಾನಾ ಬಿ ಎಂ ಅವರು ರಾಹುಲ್ ಗಾಂಧಿಯವರ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿ ಹೀಗೆ ಬರೆದುಕೊಂಡಿದ್ದಾರೆ.
ಹೀಗೆ ರಾಹುಲ್ ಗಾಂಧಿಯವರ ಅಭಿಮಾನಿಗಳು ಕಾಂತಾರಾ ನಾಯಕ ರಿಷಬ್ ಶೆಟ್ಟಿಯವರ ಮೇಲೆ ಸಿಡಿಮಿಡಿ ಎಂದು ರೊಚ್ಚಿಗೆದ್ದಿರುವುದಂತೂ ದಿಟ.