Home ಅಪರಾಧ ರಾಯಚೂರು ಡಿಡಿಪಿಐ ಕಚೇರಿ ಮೇಲೆ ಲೋಕಾ ದಾಳಿ, ಪ್ರಥಮ ದರ್ಜೆ ಸಹಾಯಕ ಬಂಧನ

ರಾಯಚೂರು ಡಿಡಿಪಿಐ ಕಚೇರಿ ಮೇಲೆ ಲೋಕಾ ದಾಳಿ, ಪ್ರಥಮ ದರ್ಜೆ ಸಹಾಯಕ ಬಂಧನ

ರಾಯಚೂರು : ಜಿಲ್ಲೆಯ(Raichur) ಖಾಸಗಿ ಶಾಲೆಯೊಂದರ(Private school) ನವೀಕರಣದ ಕೆಲಸಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ (DDPI) ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು (FDA) ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು(Lokayukta Police) ಬಲೆ ಬೀಸಿದ್ದಾರೆ.

ಇಲ್ಲಿನ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ(DC Office) ಆವರಣದಲ್ಲಿರುವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮಹಾಬಲೇಶ್ ಸಿಕ್ಕಿಬಿದ್ದ ಆರೋಪಿಯಾಗಿದ್ದಾರೆ.

ಶಾಲೆಯ ನವೀಕರಣಕ್ಕೆ ಸಿದ್ದಣ್ಣ ಎಂಬುವವರಿಂದ ಎಫ್‌ಡಿಎ ಮಹಾಬಲೇಶ್ ಅವರು ಒಟ್ಟು ಇಪ್ಪತ್ತೈದು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಆದರೆ, ಭ್ರಷ್ಟಾಚಾರಕ್ಕೆ ಮಣಿಯದ ಸಿದ್ದಣ್ಣ ಅವರು ಈ ಅಕ್ರಮದ ಕುರಿತು ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಿದ್ದರು.

ದೂರುದಾರರ ಸಮ್ಮತಿಯೊಂದಿಗೆ ಲೋಕಾಯುಕ್ತ ತಂಡವು ಸಿದ್ಧಪಡಿಸಿದ್ದ ಪೂರ್ವಯೋಜನೆಯಂತೆ, ಡಿಡಿಪಿಐ ಕಚೇರಿಯಲ್ಲಿ ದೂರುದಾರರಿಂದ ಮೊದಲ ಕಂತಿನ ರೂಪದಲ್ಲಿ ಹದಿನೈದು ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಹಾಬಲೇಶ್ ಭ್ರಷ್ಟ ಅಧಿಕಾರಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

You cannot copy content of this page

Exit mobile version