
ದೇಶಾದ್ಯಂತ ಏಕಕಾಲಕ್ಕೆ ನೂರಕ್ಕೂ ಹೆಚ್ಚು ಕಡೆಗಳಲ್ಲಿ PFI ಮತ್ತು SDPI ಮುಖಂಡರ ಮನೆಗಳನ್ನೇ ಗುರಿಯಾಗಿಸಿ NIA ದಾಳಿ ನಡೆಸಿದೆ. ಅದರ ಒಂದು ಭಾಗವಾಗಿ ಶಿವಮೊಗ್ಗ ಜಿಲ್ಲೆಯ PFI ಮುಖಂಡರ ಮನೆ ಮೇಲೆ ತಡರಾತ್ರಿ 2 ಗಂಟೆಯಿಂದ ಬೆಳಗಿನ 5 ಗಂಟೆಯ ವರೆಗೂ ವಿಚಾರಣೆ ನಡೆಸಿದ್ದಾರೆ.
ಮಾಹಿತಿಯಂತೆ PFI ಸಂಘಟನೆಯ ರಾಜ್ಯ ವಲಯ ಅಧ್ಯಕ್ಷರಾದ ಶಾಹೀದ್ ಖಾನ್ ಅವರ ಶಿವಮೊಗ್ಗ ನಿವಾಸಕ್ಕೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಬೆಳಗ್ಗಿನ ಜಾವ 5 ಗಂಟೆಗೆ ವಶಕ್ಕೆ ಪಡೆದಿದ್ದಾರೆ.
ಶಾಹೀದ್ ಖಾನ್ ರಾಜ್ಯ ವಲಯದ ಅಧ್ಯಕ್ಷ ಮಾತ್ರವಲ್ಲದೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಜಿಲ್ಲಾ ವಲಯದ ಅಧ್ಯಕ್ಷರಾಗಿಯೂ ತಮ್ಮ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಧ್ಯ ಹಲವಷ್ಟು ಅಗತ್ಯ ದಾಖಲೆಗಳೊಂದಿಗೆ ಶಾಹೀದ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ದೇಶದ ನಾನಾ ಕಡೆಗಳಲ್ಲಿ PFI ಮತ್ತು SDPI ಮುಖಂಡರ ಮನೆ ಮೇಲೆ ದಾಳಿ ನಡೆದಿದ್ದು ಬಹುತೇಕ ಕಡೆಗಳಲ್ಲಿ ಆ ಸಂಘಟನೆ ಮುಖಂಡರು ಕಾರ್ಯಕರ್ತರನ್ನು ಬಂಧಿಸಿದ ವರದಿ ಆಗಿದೆ. ಏಕಕಾಲಕ್ಕೆ ನಡೆದ ದಾಳಿಗೆ ಪ್ರಮುಖ ಕಾರಣ ಏನು ಎಂಬ ಬಗ್ಗೆ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಎಲ್ಲಾ ದಾಳಿಯೂ ತಡರಾತ್ರಿ 12 ಗಂಟೆಯ ನಂತರವೇ ನಡೆದಿದ್ದು ಸಂಘಟನೆ ಕಾರ್ಯಚಟುವಟಿಕೆ, ಸಂಘಟನೆಯ ಹಣದ ಮೂಲ, ಯಾವ್ಯಾವ ಕಡೆಗೆ ಸಂಘಟನೆ ನಂಟು ಹೊಂದಿದೆ ಎಂಬ ಬಗ್ಗೆ NIA ಮಾಹಿತಿ ಕಲೆ ಹಾಕುತ್ತಿದೆ ಎಂಬುದು ಪ್ರಾಥಮಿಕ ಸಿಕ್ಕ ವರದಿಯಾಗಿದೆ.