ನವದೆಹಲಿ: ದ್ವೇಷ ಭಾಷಣಕ್ಕೆ ಕೇಂದ್ರ ಸರ್ಕಾರವೇಕೆ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಕ್ರೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ.
ಈ ಕುರಿತು ಕರ್ನಾಟಕ ಕಾಂಗ್ರೇಸ್ ಟ್ವೀಟ್ ಮಾಡಿದ್ದು, ಬಿಜೆಪಿ ಸರ್ಕಾರಕ್ಕೆ ದ್ವೇಷವೇ ಬಂಡವಾಳವಾಗಿರುವಾಗ, ಸ್ವತಃ ಕೇಂದ್ರದ ಸಚಿವರುಗಳೇ ದ್ವೇಷ ಬಿತ್ತುತ್ತಿರುವಾಗ, ಬಿಜೆಪಿಯೇ ದ್ವೇಷದ ಪೋಷಕರಾಗಿರುವಾಗ, ಬೇಲಿಯೇ ಎದ್ದು ಹೊಲ ಮೆಯುತ್ತಿರುವಾಗ ದ್ವೇಷ ಭಾಷಣದ ಜನಕರು ಉತ್ತರಿಸುವರೇ? ಎಂದು ಬಿಜೆಪಿ ಯ ವಿರುದ್ದ ಕಿಡಿ ಕಾರಿದ್ದಾರೆ.
ಕೇಂದ್ರ ಸರಕಾರ ಅವರ ಬೇಳೆ ಕಾಳು ಬೇಯಿಸಿಕೊಳ್ಳಲು ಸುಮ್ಮನೆ ಕೂತು ನೋಡುತ್ತೆ ವಿನಹ ಮತ್ತೇನನ್ನೂ ಮಾಡುವುದಿಲ್ಲ ಎಂದು ಕಾಂಗ್ರೇಸ್ ಮುಖಂಡ ಇರ್ಫಾನ್ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.