ನವದೆಹಲಿ : ದೇಶಾದ್ಯಂತ ಎನ್‌ಐಎ ಅಧಿಕಾರಿಗಳು ಪಿಎಫ್‌ಐ ಕಾರ್ಯಕರ್ತರ ವಿರುದ್ಧ ದಾಳಿ ನಡೆಸಿದ್ದು ಇದುವರೆಗೆ 100 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯಗಳ ನಡುವೆ ಯುದ್ಧ ನಡೆಸುವ ಸಂಚು ರೂಪಿಸುವ ಚಟಿವಟಿಕೆಗಳು, ಭಯೋತ್ಪಾದನೆಗೆ ನಿಧಿ ಸಂಗ್ರಹ, ಉಗ್ರರಿಗೆ ತರಬೇತಿ ಶಿಬಿರ ಆಯೋಜನೆ, ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆಯಾಗಲು ಜನರಿಗೆ ಪ್ರಚೋದನೆ ನೀಡುತ್ತಿರುವುದು, ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದೇಶಾದ್ಯಂತ ದಾಳಿ ನಡೆಸಲಾಗಿದೆ.
ಮಾಹಿತಿ ಪ್ರಕಾರ ಎನ್‌ಐಎ ಅಧಿಕಾರಿಗಳು ಒಟ್ಟು 11 ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿಗಳ ಮೇಲೆ ಮತ್ತು ಮನೆಗಳ ಮೇಲೆ ದಾಳಿ ನಡೆಸಿದ್ದು 100 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಕರ್ನಾಟಕ 20, ಮಹಾರಾಷ್ಟ್ರ 20, ಕೇರಳದಲ್ಲಿ 22, ಆಂಧ್ರಪ್ರದೇಶ 5, ಅಸ್ಸೋಂ 9, ದೆಹಲಿ 3, ಮಧ್ಯಪ್ರದೇಶ 4, ಪುದುಚೇರಿ 3, ತಮಿಳುನಾಡು 10, ಉತ್ತರ ಪ್ರದೇಶ 8 ಹಾಗೂ ರಾಜಸ್ಥಾನದಲ್ಲಿ ಇಬ್ಬರು ಮತ್ತು ಮುಂಬೈ, ನಾಸಿಕ್, ಔರಂಗಾಬಾದ್ ಮತ್ತು ನಾಂದೇಡ್‌ನಲ್ಲಿ ಒಟ್ಟು 20 ಆರೋಪಿಗಳನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.