Home ಬ್ರೇಕಿಂಗ್ ಸುದ್ದಿ ನವೆಂಬರ್ 9 ರಿಂದ ಮತ್ತೆ ಈ ಜಿಲ್ಲೆಗಳಲ್ಲಿ ಮಳೆ : ಹವಾಮಾನ ಇಲಾಖೆ

ನವೆಂಬರ್ 9 ರಿಂದ ಮತ್ತೆ ಈ ಜಿಲ್ಲೆಗಳಲ್ಲಿ ಮಳೆ : ಹವಾಮಾನ ಇಲಾಖೆ

0

ನವೆಂಬರ್ 9ರಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಬೀಳಲಿರುವ ಮಳೆಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಕೋಲಾರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಇದಷ್ಟೇ ಅಲ್ಲದೆ ಧರ್ಮಸ್ಥಳ, ಮಾಣಿ, ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿ, ಭಾಗಮಂಡಲ, ಹೆಸರಘಟ್ಟ, ಕೊಲ್ಲೂರು, ಚನ್ನರಾಯಪಟ್ಟಣ, ಮೂಡಿಗೆರೆ, ಸೋಮವಾರಪೇಟೆ, ಕೊಟ್ಟಿಗೆಹಾರ, ಚಿಂತಾಮಣಿ, ಬೇಲೂರು, ದೊಡ್ಡಬಳ್ಳಾಪುರ, ಎಂಎಂ ಹಿಲ್ಸ್​ನಲ್ಲಿ ಈಗಾಗಲೇ ಸಣ್ಣ ಮಳೆಯಾಗಿದೆ.

ಇನ್ನು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಶೀತದ ವಾತಾವರಣ ಶುರುವಾಗಿದೆ. ಬಂಗಾಳಕೊಲ್ಲಿ ಭಾಗದಲ್ಲಿ ಚಂಡಮಾರುತದ ಪರಿಣಾಮ ಉಂಟಾದ ಹವಾಮಾನ ಏರುಪೇರು ಈಗ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ ಮಳೆ ಮುಂದುವರೆದಿದೆ ಎನ್ನಲಾಗಿದೆ.

You cannot copy content of this page

Exit mobile version