ಬೆಂಗಳೂರು : ಇತ್ತೀಚೆಗೆ ಮಾತೆತ್ತಿದರೆ ಸಾಕು ಸೆಪ್ಟೆಂಬರ್ ಕ್ರಾಂತಿ ಎನ್ನುತ್ತಿದ್ದ ಮಧುಗಿರಿಯ ಹಿರಿಯ ಶಾಸಕ ಕೆ.ಎನ್.ರಾಜಣ್ಣ (KN Rajanna) ಅವರು ಆಗಸ್ಟ್ನಲ್ಲೇ ತಮ್ಮ ಸಚಿವ ಸ್ಥಾನಬಿಟ್ಟಿದ್ದಾರೆ (Ministerial Position). ಸಹಕಾರ ಸಚಿವರಾಗಿದ್ದ ರಾಜಣ್ಣ ದಿಢೀರ್ ರಾಜೀನಾಮೆ (Resignation) ಕುರಿತಂತೆ ರಾಜ್ಯ (State) ರಾಜಕೀಯದಲ್ಲಿ (Politics) ಭಾರೀ ಸಂಚಲನಕ್ಕೆ ಕಾರಣವಾಗಿದೆ.
ರಾಜಣ್ಣ ರಾಜೀನಾಮೆಗೆ ಕಾರಣಗಳು ಏನು ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಾಗಿ ಸಂಪುಟದಿಂದಲೇ ಅವರನ್ನು ವಜಾ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ರಾಜ್ಯಪಾಲರ ಕಚೇರಿಯಿಂದ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬಂದಿದ್ದು, ಅದರಲ್ಲಿ “Removal” ಎಂಬ ಶಬ್ದವನ್ನು ಬಳಸಲಾಗಿದೆ.
ರಾಜಣ್ಣ ರಾಜೀನಾಮೆ ಅಲ್ಲ, ವಜಾ
ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ ಆಗಿದ್ದ ರಾಜಣ್ಣ ಅವರು ಅಧಿಕೃತವಾಗಿ ವಜಾಗೊಂಡಿದ್ದಾರೆ. ಹೈಕಮಾಂಡ್ ಖಡಕ್ ಸೂಚನೆ ಮೇರೆಗೆ ಅವರು ಸಚಿವ ಸ್ಥಾನಕ್ಕೆ ನೀಡಿದ್ದಾರೆ ಎನ್ನಲಾಗುತ್ತಿತ್ತು. ಆದರೆ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಾಗಿ ಅವರನ್ನು ಸಚಿವ ಸಂಪುಟದಿಂದಲೇ ವಜಾ ಮಾಡಲಾಗಿದೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಸಹಕಾರ ಸಚಿವ ಕೆ.ಎನ್. ರಾಜಣ್ಣರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕುವ ಕುರಿತು ಮಾನ್ಯ ಮಾಡಿ ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ರವಾನಿಸಲಾಗಿದ್ದು, ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಲು ನನಗೆ ಸೂಚಿಸಲಾಗಿದೆ ಅಂತ ಪತ್ರದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.