Sunday, April 28, 2024

ಸತ್ಯ | ನ್ಯಾಯ |ಧರ್ಮ

ರಾಜ್ಯ ಮಟ್ಟದ ಬುಟ್ಟಿ ಚಿತ್ತಾರ ಸ್ಪರ್ಧೆ: ವಿಜೇತರಿಗೆ ʼಚಿತ್ತಾರಗಿತ್ತಿ ಪುರಸ್ಕಾರʼ

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯುವ 2022 ನೇ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಸೆ ಚಿತ್ತಾರ ಮತ್ತು ಭೂಮಣ್ಣಿ ಬುಟ್ಟಿ ಚಿತ್ತಾರ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ʼಚಿತ್ತಾರಗಿತ್ತಿ ಪುರಸ್ಕಾರʼವನ್ನು ನೀಡಲಾಗುತ್ತಿದೆ.

ಧೀರ ದೀವರ ಬಳಗವು ಶಿವಮೊಗ್ಗದಲ್ಲಿ ʼದೀವರ ಸಾಂಸ್ಕೃತಿಕ ವೈಭವʼ ಕಾರ್ಯಕ್ರವೊಂದನ್ನು ಹಮ್ಮಿಕೊಳ್ಳಲಾಗಿದ್ದು, ದಿನಾಂಕವನ್ನು ಅತೀ ಶೀಘ್ರದಲ್ಲೇ ನಿಗದಿ ಪಡಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ʼರಾಜ್ಯ ಮಟ್ಟದ ಹಸೆ ಚಿತ್ತಾರ ಮತ್ತು ಭೂಮಣಿ ಚಿತ್ತಾರದ ಸ್ಪರ್ಧೆʼಯನ್ನು ಏರ್ಪಡಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ಮತ್ತು ವಿಜೇತರಿಗೆ ವಿಶೇಷವಾಗಿ ಚಿತ್ತಾರಗಿತ್ತಿ ಪುರಸ್ಕಾರದ ಜೊತೆಗೆ ನಗದು ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಹಸೆ ಚಿತ್ತಾರ ಮತ್ತು ಭೂಮಣ್ಣಿ ಬುಟ್ಟಿ ಕಲೆಗಾಗರಿಗೆ ಕೆಲವೊಂದಿಷ್ಟು ನಿಯಮಾವಳಿಗಳನ್ನು ಇಟ್ಟಿದ್ದಾರೆ. ಅದೇನೆಂದರೆ,

  • ಬುಟ್ಟಿ ಚಿತ್ತಾರವು ಸಾಂಪ್ರದಾಯಿಕ ಬಣ್ಣ, ವಿನ್ಯಾಸ, ದೇಶಿ ಶೈಲಿಯಲ್ಲಿಯೇ ಇರಬೇಕು.
  • ಚಿತ್ತಾರವು ರಂಗೋಲಿಯ ಅನುಕರಣೆಯಲ್ಲಿ ಇರಬಾರದು ಮತ್ತು ಆಯಿಲ್‌ ಪೇಯಿಂಟ್‌, ಆಕ್ರಿಲಿಕ್‌ ಬಳಸಿದ್ದ ಸಿದ್ದ ಮಾದರಿ ಚಿತ್ತಾರದ ಬುಟ್ಟಿಗಳನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗುವುದಿಲ್ಲ.
  • ಹಸೆ ಚಿತ್ತಾರವನ್ನು ಡ್ರಾಯಿಂಗ್‌ ಸೀಟ್‌ ಅಥವಾ ಯಾವುದೇ ಕ್ಯಾನ್ವಾಸ್‌, ನಾವಿನ್ಯತೆಗೆ ಅವಕಾಶವಿದೆ. ಆಧುನಿಕ ವರ್ಣವಿನ್ಯಾಸವನ್ನು ಬಳಸಬಹುದು. ಆದರೆ ಚಿತ್ತಾರ ಸಂಪ್ರದಾಯಿಕ ಆದಿಮ ರೇಖಾಶೈಲಿಯಲ್ಲೇ ಇರಬೇಕು. ಆಧುನಿಕ ಪೆನ್ನುಗಳಿಂದ ಬಿಡಿಸದೆ ಕುಂಚಗಳನ್ನೇ ಬಳಸುವುದು ಉತ್ತಮ.

ಇದಿಷ್ಟೂ ಸ್ಪರ್ಧಾರ್ಥಿಗಳ ಎದುರಿರುವ ಸವಾಲುಗಳಾಗಿವೆ. ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ಹೊಂದಿದ್ದು ಉಚಿತ ನೋಂದಣಿ ಇರಲಿದೆ. ನೋಂದಣಿಗಾಗಿ [email protected] ಇಮೇಲ್‌ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ :ನವರಸಗಳಲ್ಲಿ ನವದುರ್ಗೆಯರು- ಶೈಲಪುತ್ರಿ
ನವರಾತ್ರಿ ಪ್ರಯುಕ್ತ ಇದೊಂದು ವಿಶೇಷ ಸರಣಿಯನ್ನು Peepal / ಪೀಪಲ್ ಹೊರತಂದಿದೆ. ನವರಾತ್ರಿಯ ನವದುರ್ಗೆಯರನ್ನು ನವರಸಗಳಲ್ಲಿ ವರ್ಣಿಸುವ ಕೆಲಸವನ್ನು ಕವಯತ್ರಿ ಶೋಭಾ ಗಂಗಾಧರ್‌ ಮೃಗ ನಯನಿ ಅವರು ಮಾಡಿದ್ದಾರೆ. ಇದೊಂದು ವಿನೂತನ ಪ್ರಯತ್ನ. ಈ ವಿಡಿಯೋದಲ್ಲಿ ನವದುರ್ಗೆಯರಲ್ಲಿ ಮೊದನೆಯವಳಾದ ಶೈಲಪುತ್ರಿಯ ವಿವರಣೆಯಿದೆ.

Related Articles

ಇತ್ತೀಚಿನ ಸುದ್ದಿಗಳು