ರಾಮನಗರ: ರಾಮನಗರ ಜಿಲ್ಲೆಯಲ್ಲಿ ಸೋಮವಾರ (ಮೇ 19, 2025) ದುರಂತವೊಂದು ಸಂಭವಿಸಿದೆ. ಸ್ಥಳೀಯ ಜಲಾಶಯದಲ್ಲಿ ಈಜಲು ತೆರಳಿದ್ದ ಏಳು ಯವತಿಯರ ಪೈಕಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ, ಇತರ ನಾಲ್ವರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ವಿವರಗಳ ಪ್ರಕಾರ, ಈ ಯುವತಿಯರು ರಾಮನಗರದ ಸಮೀಪದ ಗ್ರಾಮವೊಂದರಿಂದ ಬಂದಿದ್ದರು. ಜಲಾಶಯದಲ್ಲಿ ಈಜುವಾಗ ಆಳವಾದ ಭಾಗಕ್ಕೆ ತೆರಳಿದಾಗ ಈ ದುರಂತ ಸಂಭವಿಸಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿಗಳಾದ ಭಾರ್ಗವಿ(22), ರಮ್ಯ(20),ಮಧು(25) ಮೃತ ದುರ್ದೈವಿಗಳು.
ಮಾಗಡಿಯ ಐನೋರಪಾಳ್ಯ ಗ್ರಾಮದ ಹಬ್ಬಕ್ಕೆ ಬಂದಿದ್ದ ಯುವತಿಯರಲ್ಲಿ ಏಳು ಮಂದಿ ವೈ.ಜಿ.ಗುಡ್ಡ ಜಲಾಶಯಕ್ಕೆ ಬಂದಿದ್ದರು.
ಸ್ಥಳೀಯರು ಸಕಾಲದಲ್ಲಿ ಮಧ್ಯಪ್ರವೇಶಿಸಿ ನಾಲ್ವರನ್ನು ರಕ್ಷಿಸಿದರೂ, ಇತರ ಮೂವರನ್ನು ಕಾಪಾಡಲು ಸಾಧ್ಯವಾಗಲಿಲ್ಲ. ರಕ್ಷಿಸಲಾದ ಯವತಿಯರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಲಾಶಯದ ಸುತ್ತಲೂ ಸುರಕ್ಷತಾ ಕ್ರಮಗಳ ಕೊರತೆ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.