ಚರ್ಮಗಂಟು ರೋಗ ಭೀತಿ: ರಾಮನಗರಲ್ಲಿ ಒಂದು ತಿಂಗಳು ಜಾನುವಾರು ಜಾತ್ರೆ ನಿಷೇಧ

ರಾಮನಗರ : ರಾಜ್ಯದಲ್ಲಿ ಜಾನುವಾರಗಳಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಚರ್ಮಗಂಟುರೋಗದಿಂದ ರಾಮನಗರದ ನಡೆಯಬೇಕಾಗಿದ್ದ ಜಾನುವಾರುಗಳ ಜಾತ್ರೆಯನ್ನು ಒಂದು ತಿಂಗಳ ಕಾಲ ನಿಷೇದ ಮಾಡಲಾಗಿದೆ.

ರಾಜ್ಯಾದ್ಯಂತ ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುವಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜಾನುವಾರುಗಳು ಈ ಕಾಯಿಲೆಗೆ ತುತ್ತಾಗಿ ಬಲಿಯಾಗುತ್ತಲೇ ಇವೆ. ಈ ಸಲುವಾಗಿ ರಾಮನಗರದಲ್ಲಿ ಮಾರಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಕ್ಟೋಬರ್‌ 11 ರಂದು ನಡೆಯಬೇಕಿದ್ದ ಹಸುಗಳ ಜಾತ್ರೆಯನ್ನು ಮತ್ತು ಜಾನುವಾರು ಸಾಗಾಣಿಕೆಯನ್ನು ನವೆಂಬರ್‌ 10 ರವರೆಗೆ ನಿಷೇದ ಮಾಡಲಾಗಿದೆ ಎಂದು ರಾಮನಗರದ ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌ ಆದೇಶ ನೀಡಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು