Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಇತಿಹಾಸ ಪಠ್ಯದಲ್ಲಿ ರಾಮಾಯಣ – ಮಹಾಭಾರತ: NCERT ಸಮಿತಿ

ಇತಿಹಾಸ ಪಠ್ಯದಲ್ಲಿ ರಾಮಾಯಣ – ಮಹಾಭಾರತ: NCERT ಸಮಿತಿ

0
ಸಾಂದರ್ಭಿಕ ಚಿತ್ರ

ಬೆಂಗಳೂರು: NCERTಯ ಉನ್ನತ ಮಟ್ಟದ ಸಮಿತಿ ಶಾಲಾ ಇತಿಹಾಸ ಪಠ್ಯಕ್ರಮದಲ್ಲಿ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸಲು ಶಿಫಾರಸು ಮಾಡಿದೆ.

“ಸಮಾಜ ವಿಜ್ಞಾನದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸಮಿತಿಯು ಒತ್ತು ನೀಡಿದೆ” ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಹೇಳಿದ್ದಾರೆ. “ತಮ್ಮ ಹದಿಹರೆಯದ ಪ್ರಾಯದಲ್ಲಿ ವಿದ್ಯಾರ್ಥಿಗಳು ಸ್ವಾಭಿಮಾನ, ದೇಶಭಕ್ತಿ ಮತ್ತು ರಾಷ್ಟ್ರದ ಬಗ್ಗೆ ಹೆಮ್ಮೆಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂಸ್ಕೃತಿ ಹಾಗೂ ದೇಶದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದು ಐಸಾಕ್ ಹೇಳಿದ್ದಾರೆ. “ಕೆಲವು ಬೋರ್ಡ್‌ಗಳು ಈಗಾಗಲೇ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುತ್ತಿವೆ, ಆದರೆ ಅದನ್ನು ಹೆಚ್ಚು ವಿಸ್ತಾರವಾದ ರೀತಿಯಲ್ಲಿ ಮಾಡಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.

7 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಹಾಕಾವ್ಯಗಳನ್ನು ಕಲಿಸಲು ಶಿಫಾರಸು ಮಾಡಲಾಗಿದೆ. ಹಾಗೂ, ಸಂವಿಧಾನದ ಪೀಠಿಕೆಯನ್ನು ತರಗತಿಯ ಗೋಡೆಗಳ ಮೇಲೆ ಬರೆಯುವಂತೆಯೂ ಸಮಿತಿ ಶಿಫಾರಸು ಮಾಡಿದೆ.

ಅಕ್ಟೋಬರ್‌ನಲ್ಲಿ ಸಮಿತಿಯು ಶಾಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ” ಬದಲಿಗೆ “ಭಾರತ್” ಎಂದು ಬಳಸಲು ಶಿಫಾರಸು ಮಾಡಿತ್ತು. ಪಠ್ಯಕ್ರಮದಲ್ಲಿ “ಪ್ರಾಚೀನ ಇತಿಹಾಸ – ancient history” ಬದಲಿಗೆ “ಶಾಸ್ತ್ರೀಯ ಇತಿಹಾಸ-classical history” ಎಂದು ಬಳಸಲು ಮತ್ತು ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ “ಭಾರತೀಯ ಜ್ಞಾನ ವ್ಯವಸ್ಥೆ – “Indian Knowledge System” ಅನ್ನು ಸೇರಿಸಲು ಸಲಹೆ ನೀಡಲಾಗಿದೆ.

National Council of Educational Research and Training ಇಂಡಿಯಾ ಎಂಬುದನ್ನು ಭಾರತ ಎಂದು ಬದಲಿಸುವಂತಹ  ಯಾವುದೇ ಬದಲಾವಣೆಗಳ ಬಗ್ಗೆ ಕಾಮೆಂಟ್ ಮಾಡುವುದು “ತುಂಬಾ ಅಕಾಲಿಕ” ಎಂದು ಹೇಳಿದೆ.

ಏಳು ಸದಸ್ಯರ ಸಮಾಜ ವಿಜ್ಞಾನದ ಮೇಲೆ ಕೆಲಸ ಮಾಡುವ ಈ  ಸಮಿತಿಯು ವಿವಿಧ ವಿಷಯಗಳ ಕುರಿತು ಶಿಫಾರಸುಗಳನ್ನು ನೀಡಲು NCERT ರಚಿಸಿರುವ 25 ತಜ್ಞರ ಸಮಿತಿಗಳಲ್ಲಿ ಒಂದಾಗಿದೆ.

You cannot copy content of this page

Exit mobile version