ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ನಂತರ ತನಿಖೆ ಮುಂದುವರಿದ ಭಾಗವಾಗಿ ಮತ್ತೋರ್ವ ಪ್ರಭಾವಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪ್ರಖ್ಯಾತ ಹೊಟೇಲ್ ನ ನಿರ್ದೇಶಕರೊಬ್ಬರ ಮಗನಾಗಿದ್ದಾರೆ ಎಂದು ತಿಳಿದು ಬಂದಿದೆ.
ಅರೆಸ್ಟ್ ಆಗಿರುವ ರನ್ಯಾ ರಾವ್ ವಿಚಾರಣೆ ವೇಳೆ ಅನೇಕ ವಿಷಯಗಳನ್ನು ಬಾಯ್ಬಿಟ್ಟಿದ್ದಾರೆ. ಅವುಗಳಲ್ಲಿ ಹಲವು ವ್ಯಕ್ತಿಗಳು ಈ ಪ್ರಕರಣದ ಅಡಿಯಲ್ಲಿ ಬಂದಿದ್ದಾರೆ. ಅದರಲ್ಲಿ ತರುಣ್ ರಾಜ್ ಬಂಧಿತ ಮತ್ತೋರ್ವ ಆರೋಪಿಯಾಗಿದ್ದಾರೆ. ತರುಣ್ ರಾಜ್ ಪ್ರಖ್ಯಾತ ಹೊಟೇಲ್ ನ ನಿರ್ದೇಶಕರೊಬ್ಬರ ಮಗನಾಗಿದ್ದಾರೆ.
ತರುಣ್ ರಾಜ್ ಎಂಬಾತನನ್ನು ಡಿಆರ್ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾನ್ಯಾ ರಾವ್ ಅವರ ಕಾಲ್ ಲಿಸ್ಟ್ ತೆಗೆದು ಕೂಡ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ತರುಣ್ ರಾಜ್ ಎಂಬಾತ ನಟಿ ರನ್ಯಾ ರಾವ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.
ರನ್ಯಾ ರಾವ್ ಜೊತೆ ದುಬೈ ಪ್ರವಾಸಕ್ಕೆಂದು ತರುಣ್ ರಾಜ್ ಕೂಡ ಹೋಗಿದ್ದ ಎನ್ನಲಾಗ್ತಿದೆ. ತರುಣ್ ರಾಜ್ ಪ್ರಖ್ಯಾತ ಹೊಟೇಲ್ ನ ನಿರ್ದೇಶಕರೊಬ್ಬರ ಮಗನಾಗಿದ್ದಾರೆ ಎಂದು ವರದಿ ಆಗಿದೆ. ಡಿಆರ್ ಐ ಅಧಿಕಾರಿಗಳಿಂದ ಬೆಳಗ್ಗೆ ತರುಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.