ಹಾಸನ: ಕರ್ತವ್ಯದಲ್ಲಿರುವ ಜಿಲ್ಲೆಯ ಕೆಲ ಪೊಲೀಸರು ಸಂಜೆಗೆ ಎಣ್ಣೆ ಹಾಕ್ತಾರೆ!, ಬಜೆಟ್ನಲ್ಲಿ ನಮ್ಮ ಜಿಲ್ಲೆಗೆ ಎಣ್ಣೆ, ಜೂಜು, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯು ಕರ್ನಾಟಕ ಬಜೆಟ್ ಪುಸ್ತಕದಲ್ಲಿ ಇಲ್ಲ. ದೆಹಲಿ ಬಜೆಟ್ನ ಬುಕ್ನಲ್ಲಿದೆ ಮುಂದಿನ ಚುನಾವಣೆ ವೇಳೆಗೆ ಮಹಾನಗರ ಪಾಲಿಕೆ ಆಗುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಟೀಕಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಸೋಮವಾರ ಮಾತನಾಡಿ, ಕರ್ತವ್ಯದಲ್ಲಿರುವಾಗಲೇ ಕೆಲವು ಪೊಲೀಸರು ಸಂಜೆ ಏಳು ಗಂಟೆಗೆ ಎಣ್ಣೆ ಹಾಕ್ತಾರೆ! ಹಾಸನ ಜಿಲ್ಲೆಯ ಎಸ್ಪಿಯವರು ಇದನ್ನು ತಡೆಗಟ್ಟಬೇಕು. ರಾಜ್ಯದ ಐದು ಗ್ಯಾರಂಟಿಗಳು ಮುಂದುವರೆದಿದ್ದರೂ, ಹಾಸನ ಜಿಲ್ಲೆಗೆ ಯಾವುದೂ ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದ ಅವರು, ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ ಗಾಂಜಾ ಗ್ಯಾರೆಂಟಿ ಕೊಟ್ಟಿದ್ದಾರೆ. ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ವ್ಯಂಗವಡಿದರು. ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ.
ಮಟ್ಕಾ ಜೂಜು, ಮದ್ಯ ಸೇವನೆಯಿಂದ ಜನರ ಮನೆಗಳ ಹೆಣ್ಣು ಮಕ್ಕಳು ಒಡವೆ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬೇಸರವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆಳಮಟ್ಟದ ಅಧಿಕಾರಿಗಳು ಅವರ ನಿಯಂತ್ರಣದಲ್ಲಿಲ್ಲ ಎಂದು ಆರೋಪಿಸಿದರು. ಕೂಡಲೇ ಎಸ್ಪಿ ಅವರು ಕ್ರಮಕೈಗೊಳ್ಳಲು ಮುಂದಾಗಬೇಕು. ರಾಜ್ಯ ಸರ್ಕಾರದ 25-26ನೇ ಸಾಲಿನ ಬಜೆಟ್ ಮಂಡಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಹಾಸನ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆ ಸಿಕ್ಕಿಲ್ಲ. ರಾಜ್ಯದಲ್ಲಿ ಐದು ಗ್ಯಾರಂಟಿಯನ್ನು ಮುಂದುವರೆಸಿದ್ದಾರೆ. ವರತು ಹಾಸನ ಜಿಲ್ಲೆಗೆ ರಾಜ್ಯದ ಬೆಟ್ ನಲ್ಲಿ ಏನು ನೀಡಿಲ್ಲ. ಜೂಜು, ಎಣ್ಣೆ, ಮಟ್ಕಾ ಗಾಂಜಾ ಗ್ಯಾರಂಟಿ ಮಾತ್ರ ಸಿಕ್ಕಿದೆ ಎಂದು ಕಿಡಿಕಾರಿದರು.
ಈ ಬಜೆಟ್ ನಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡುತ್ತಾರೆ ಎಂಬ ನಿರೀಕ್ಷೆ ಈಗ ವ್ಯರ್ಥವಾಗಿದೆ. ಫೈಓವರ್‌ಗೆ ಅನುದಾನ ನಿರೀಕ್ಷಿಸಿದ್ದರೂ, ಬಜೆಟ್‌ನಲ್ಲಿ ಏನೂ ಸಿಕ್ಕಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಗಳಿಗೆ ಮುಂದುವರಿದ ಅನುದಾನ ನೀಡಲಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ನೀಡಬೇಕಿತ್ತು, ಆದರೆ ಕೊಟ್ಟಿಲ್ಲ. ಹಾಸನ ಕರ್ನಾಟಕದ ಬಜೆಟ್ ಬುಕ್‌ನಲ್ಲಿ ಇಲ್ಲ, ದೆಹಲಿ ಹಾಸನ ಕರ್ನಾಟಕದ ಬಜೆಟ್ ಬುಕ್‌ನಲ್ಲಿ ಇಲ್ಲ, ದೆಹಲಿ ಬಜೆಟ್ ಬುಕ್‌ನಲ್ಲಿ ಮಾತ್ರ ಇದೆ. ಕೇಂದ್ರ ಸರಕಾರದಿಂದ ಜಿಲ್ಲೆಗೆ ಯಾವ ಯೋಜನೆ ಬೇಕು ತರುವ ಶಕ್ತಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
1000 ವಸತಿ ಗೃಹಗಳನ್ನಾದರೂ ಮಂಜೂರು ಮಾಡಬಹುದಿತ್ತು. ಕೆಲವರು ಟೀಕೆ ಮಾಡ್ತಾರೆ, ಆದರೆ ನಾನು ಎದೆಗುಂದುವುದಿಲ್ಲ. ಹಾಸನ ಮಹಾನಗರ ಪಾಲಿಕೆ ಘೋಷಣೆಯಾಗಿದ್ದರೂ, ಅದರ ಅಭಿವೃದ್ಧಿಗೆ ಸರ್ಕಾರ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಮುಂದಿನ ಚುನಾವಣೆಗೆ ಹಾಸನ ಮಹಾನಗರ ಪಾಲಿಕೆ ಆಗಬಹುದು, ಆದರೆ ಬೆಳವಣಿಗೆಗೆ ಹಣವೇ ಇಲ್ಲ ಎಂದು ದೂರಿದರು. ಈ ಸರ್ಕಾರ ಹಾಸನ ಜಿಲ್ಲೆಯ ಬೆಳವಣಿಗೆಯನ್ನು ಸಹಿಸಲಾರದು ಎಂದು ಟೀಕಿಸಿದರು.
ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.