ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ಸ್ಟ್ಯಾಂಡ್-ಅಪ್ ಕಮೆಡಿಯನ್ ಕುನಾಲ್ ಕಾಮ್ರಾ ಮಾಡಿದ್ದ ತಮಾಷೆಗಳು ಭಾರಿ ಕೋಲಾಹಲಕ್ಕೆ ಕಾರಣವಾಗಿವೆ.
ಅವರು ಮತ್ತೊಮ್ಮೆ ಶಿಂಧೆ ಕುರಿತು ಹೇಳಿಕೆ ನೀಡಿದ್ದು, ಮಿತ್ರ ಪಕ್ಷ ಬಿಜೆಪಿಗೆ ಶಿಂಧೆಯನ್ನು ಕಂಡರೆ ಇಷ್ಟವಿಲ್ಲ ಎನ್ನಿಸುತ್ತಿದೆ ಎಂದು ಹೇಳಿದ್ದಾರೆ
ನನ್ನ ತಮಾಷೆಗೆ ಪ್ರತಿಕ್ರಿಯೆಯಾಗಿ ಹಲವರು ನನಗೆ ಬೆದರಿಕೆ ಒಡ್ಡಿದ್ದಾರೆ. ಈ ವಿವಾದದ ನಂತರ, 500 ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದವು. “ಅವರೆಲ್ಲರೂ ಶಿವಸೇನೆ ಪಕ್ಷಕ್ಕೆ ಸೇರಿದವರು” ಎಂದು ಕಾಮ್ರಾ ಹೇಳಿದ್ದಾರೆ.
ತನಗೆ ರಾಜಕೀಯ ನಾಯಕರಿಂದ ಬೆದರಿಕೆ ಬರುತ್ತಿದೆ, ಅವರು ತನಗೆ ಪಾಠ ಕಲಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಸೀಮಿತವಲ್ಲ ಎಂದೂ ಅವರು ಹೇಳಿದರು.