ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ನಟ ದರ್ಶನ್ ಗೆ (Actor Darshan) ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ ಜಾಮೀನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್ ಪರ ವಕೀಲರು ಸುಪ್ರೀಂ (Supreme court) ಮೆಟ್ಟಿಲೇರಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಪ್ರತಿದಿನವೂ ವಿಚಾರಣೆಯನ್ನು ತ್ವರಿತ ಗತಿಯಲ್ಲಿ ನಡೆಸುವಂತೆ ಸೂಚಿಸಿದ ನ್ಯಾಯಾಲಯ ಒಂದು ವರ್ಷದೊಳಗೆ ಟ್ರಯಲ್ ಮುಗಿಸುವಂತೆ ಆದೇಶಿಸಿದೆ. ಇಂದಿನಿಂದ ಒಂದು ವರ್ಷದೊಳಗೆ ವಿಚಾರಣೆ ನಡೆಯದಿದ್ದರೆ ಬಳಿಕ ದರ್ಶನ್ ಜಾಮೀನು ಅರ್ಜಿ ನೀಡುವಂತೆ ಟ್ರಯಲ್ ಕೋರ್ಟ್ ಗೆ ಸುಪ್ರೀಂ ನಿರ್ದೇಶನ ನೀಡಿದೆ.
ಇದುವರೆಗೂ ಕೇವಲ 10 ಸಾಕ್ಷಿಗಳ ವಿಚಾರಣೆ ನಡೆದಿದೆ. ಇನ್ನು 150 ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಸಧ್ಯಕ್ಕೆ ಸಾಕ್ಷಿಗಳ ವಿಚಾರಣೆಯ ವಿಳಂಬದಿಂದಾಗಿ ನಟ ದರ್ಶನ್ ಗೆ ಮೂಲಭೂತ ಸೌಲಭ್ಯಗಳೂ ಕೂಡ ಸಿಗುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಮನವಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪರ್ದಿವಾಲಾ ದರ್ಶನ್ ಗೆ ಜೈಲಿನಲ್ಲಿಯೇ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ಸಾಕ್ಷಿಗಳನ್ನು ಪದೇ ಪದೇ ವಿಚಾರಣೆಗೊಳಪಡಿಸುವುದು ಬೇಡ ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
