Home ಬೆಂಗಳೂರು ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮಿತಿಮೀರುತ್ತಿದೆ ಜು.19ರವರೆಗೆ – ತಾಪಮಾನ ಏರಿಕೆ

ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮಿತಿಮೀರುತ್ತಿದೆ ಜು.19ರವರೆಗೆ – ತಾಪಮಾನ ಏರಿಕೆ

ಬೆಂಗಳೂರು : ಕರ್ನಾಟಕದಲ್ಲಿ ವರುಣನ (summer) ಅಬ್ಬರ ಸಂಪೂರ್ಣವಾಗಿ ತಣ್ಣಗಾಗಿದ್ದು, ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಮಿತಿಮೀರುತ್ತಿದೆ. ಮಳೆಗಾಲದ (monsoon) ನಡುವೆಯೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೂರ್ಯನ ಶಾಖ ಜನರನ್ನು ಕಂಗಾಲಾಗಿಸಿದೆ.

ಈಗಾಗಲೇ ಉತ್ತರ ಕರ್ನಾಟಕ, ಮಲೆನಾಡು, ಹಳೆ ಮೈಸೂರು ಹಾಗೂ ಕರಾವಳಿ ಭಾಗದಲ್ಲಿ ಸತತ ಮೂರು ದಿನಗಳಿಂದ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಸಾರ್ವಜನಿಕರಿಗೆ ಭಾರತೀಯ ಹವಾಮಾನ ಇಲಾಖೆ (IMD) ಮತ್ತೊಂದು ಶಾಕಿಂಗ್ ಮುನ್ಸೂಚನೆ ನೀಡಿದ್ದು, ಮುಂದಿನ 5 ದಿನಗಳ ಕಾಲ (ಜುಲೈ 19ರವರೆಗೆ) ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಬಿಸಿಲಿನ ಬೇಗೆ ಹೆಚ್ಚಾಗಲಿರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಜುಲೈ 15 ಮತ್ತು 16ರಂದು ತಾಪಮಾನವು ಗಣನೀಯವಾಗಿ ಹೆಚ್ಚಾಗುವ ಮುನ್ಸೂಚನೆ ಇದೆ. ಸೆಖೆ ಹಾಗೂ ಉಷ್ಣಾಂಶದ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.

ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಗಾರು ಮಳೆ ಆರ್ಭಟಿಸಬೇಕಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯ ಹಾಗೂ ಮುಂಗಾರು ಮಾರುತಗಳ ದೌರ್ಬಲ್ಯದಿಂದಾಗಿ ಮಳೆ ಸಂಪೂರ್ಣ ಕ್ಷೀಣಿಸಿದ್ದು, ಜನರು ಜುಲೈ ತಿಂಗಳಿನಲ್ಲೇ ಮಾರ್ಚ್-ಏಪ್ರಿಲ್ ತಿಂಗಳಿನ ಬೇಸಿಗೆಯ ಅನುಭವ ಪಡೆಯುವಂತಾಗಿದೆ.

ಕರಾವಳಿಯ ಹೊನ್ನಾವರದಲ್ಲಿ 31.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು ಸಾಮಾನ್ಯಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕಾರವಾರದಲ್ಲಿ 33.6(ಹೆಚ್ಚಳ 3.9), ಮಂಗಳೂರು ವಿಮಾನ ನಿಲ್ದಾಣದಲ್ಲಿ 31.4 ಡಿಗ್ರಿ ಸೆಲ್ಸಿಯಸ್ ( 2.8) ಹಾಗೂ ನಗರದಲ್ಲಿ 31.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 29 ಡಿಗ್ರಿ( ಹೆಚ್ಚಳ 2.6), ಬೀದರ್ 37 ಡಿಗ್ರಿ(7), ವಿಜಯಪುರ 34 2(3.3), ಬಾಗಲಕೋಟೆ 33.5 ಡಿಗ್ರಿ, ಧಾರವಾಡ 30.6 ಡಿಗ್ರಿ (3.2), ಗದಗ 33.8(4.9), ಕಲಬುರಗಿ 37.1 ಡಿಗ್ರಿ (4,7), ಹಾವೇರಿ 29.2 20 (1.6), ಕೊಪ್ಪಳ 35.4 ಡಿಗ್ರಿ (5) ರಾಯಚೂರು ೩೮,೨ ಡಿಗ್ರಿ (ಹೆಚ್ಚಳ) ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಒಳನಾಡಿನ ಚಿತ್ರದುರ್ಗದಲ್ಲಿ 32.4 ಡಿಗ್ರಿ( 4.1), ದಾವಣಗೆರೆ 32.5 ಡಿಗ್ರಿ(4.1), ಹಾಸನ 30.6( 4.2), ಚಿಂತಾಮಣಿ 34.2(4.4), ಮಂಡ್ಯ 34.2, ಮೈಸೂರು 34 ಡಿಗ್ರಿ( ಹೆಚ್ಚಳ 5.3) ದಾಖಲಾಗಿದೆ.

You cannot copy content of this page

Exit mobile version