ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧೋಲನ ಮನೆಯಿಂದ ಮಳವಳ್ಳಿ ಮಾರ್ಗವಾಗಿ ತೊಳಲು, ಕೋಗಿಲೆ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಹಾಗೂ ಈ ಕಡೆಯಿಂದ ನೇರಳೆ ಕಟ್ಟೆ ,ಅರೇಹಳ್ಳಿ,ಬಿಕ್ಕೊಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುತ್ತದೆ .ಈ ರಸ್ತೆ ವ್ಯಾಪ್ತಿಯಲ್ಲಿ ಯಗಚಿ ಜಲಾಶಯದ ನಿರಾಶ್ರಿತರ ತೋಟಗಳು ಮತ್ತು ಮಳವಳ್ಳಿಯ ಬಳಿ ನಿರಾಶ್ರಿತರ ವಸತಿ ಕೇಂದ್ರವು ಸಹ ಇದ್ದು ಆದರೆ ಈ ರಸ್ತೆಗೆ ವೈ,ಎನ್,ರುದ್ರೇಶ್ ಗೌಡರು ಶಾಸಕರಾಗಿದ್ದ ಕಾಲದಲ್ಲಿ ಮಳವಳ್ಳಿ ಮತ್ತು ದೋಲನಮನೆ ಮಧ್ಯದಲ್ಲಿ ಜಾರಗಲ್ ಹಳ್ಳಕ್ಕೆ ಸೇತುವೆ ನಿರ್ಮಿಸಿ ಅಲ್ಲಿಯವರೆಗೂ ಡಾಂಬರೀಕರಣ ಮಾಡಲಾಗಿರುತ್ತದೆ.
ಆದರೆ ಅಲ್ಲಿಂದ ಮುಂದೆ ದೋಲನ ಮನೆವರೆಗೂ ಇದುವರೆಗೂ ಜೆಲ್ಲಿ ಕೂಡ ಕಂಡಿರುವುದಿಲ್ಲ.ಈಗ ಈ ರಸ್ತೆಯು ಸಂಪೂರ್ಣ ಹಾಳಾಗಿ ಗುಂಡಿ ಬಿದ್ದಿದ್ದು ಕೆಸರುಮಯವಾಗಿದ್ದು ಈ ರಸ್ತೆಯಲ್ಲಿ ನಿರಾಶ್ರಿತರ ತೋಟಗಳಿಗೆ ಸರಕು ಸರಂಜಾಮುಗಳನ್ನು ಸಾಗಿಸುವುದು, ಕೂಲಿ ಕಾರ್ಮಿಕರನ್ನು ಕರೆತರುವುದು ಸಂಪೂರ್ಣ ಕಷ್ಟಕರವಾಗಿದೆ. ಇದುವರೆಗೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಯಾರೂ ಇದುವರೆವಿಗೂ ಇದನ್ನು ಗಮನಿಸಿರುವುದಿಲ್ಲ ಮತ್ತು ರಸ್ತೆ ರಿಪೇರಿ ಮಾಡಿರುವುದಿಲ್ಲ ದಯಮಾಡಿ ಈ ಬಾರಿ ಈ ರಸ್ತೆಗೆ ಕನಿಷ್ಠ ಪಕ್ಷ ಜೆಲ್ಲಿ ಹಾಕಿಸಿ ಕೊಡುವಂತೆ ಸಾರ್ವಜನಿಕ ರುಗಳು,ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.