Home ಆಟೋಟ ಅಮಿತ್‌ ಶಾ ಮಗನ ಕೈಯಿಂದ ಅರುಣ್‌ ಜೇಟ್ಲಿ ಮಗನ ಕೈಗೆ ಬಿಸಿಸಿಐ ಸಾರಥ್ಯ?

ಅಮಿತ್‌ ಶಾ ಮಗನ ಕೈಯಿಂದ ಅರುಣ್‌ ಜೇಟ್ಲಿ ಮಗನ ಕೈಗೆ ಬಿಸಿಸಿಐ ಸಾರಥ್ಯ?

0

ಜಯ್ ಶಾ ಅವರು ನವೆಂಬರ್‌ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಯಲಿದ್ದು, ರೋಹನ್ ಜೇಟ್ಲಿ ಅವರ ಸ್ಥಾನಕ್ಕೆ ಮುಂಚೂಣಿಯ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಐಸಿಸಿಯ ನೂತನ ಅಧ್ಯಕ್ಷರಾಗಿ ಶಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ಮುಂದಿನ ಐಸಿಸಿ ಮುಖ್ಯಸ್ಥರಾಗಿ ಗ್ರೆಗ್ ಬಾರ್ಕ್ಲೇ ಸ್ಥಾನಕ್ಕೆ ಬರಲಿದ್ದಾರೆ. ಪ್ರಸ್ತುತ BCCI ಕಾರ್ಯದರ್ಶಿಯಾಗಿರುವ ಜಯ್‌ ಶಾ ಡಿಸೆಂಬರ್ 1ರಿಂದ ICC ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ICC ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಯೆನ್ನುವ ಅಗ್ಗಳಿಕೆ ಶಾ ಅವರದು.

ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಜಯ್ ಶಾ ಪಾತ್ರರಾಗಲಿದ್ದಾರೆ. ಜಗ್ಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಇತರ ಭಾರತೀಯರು.

2009ರಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ ಸೇರುವುದರೊಂದಿಗೆ ಕ್ರಿಕೆಟ್ ಆಡಳಿತದಲ್ಲಿ ಶಾ ಅವರ ಪ್ರಯಾಣ ಪ್ರಾರಂಭವಾಯಿತು. 2019ರಲ್ಲಿ, ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಸೇರಿಕೊಂಡರು.2022ರಲ್ಲಿ, ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದರು.

ಅದೇ ವರ್ಷದಲ್ಲಿ, ಅವರು ICC ಯ ಪ್ರಭಾವಿ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ (F&CA) ಸಮಿತಿಯ ಭಾಗವಾದರು ಮತ್ತು 2023ರಲ್ಲಿ ಅದರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಶಾ ಹೊಸ ICC ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ತಮ್ಮ BCCI ಹಾಗೂ ICCಯ F&CA ಸಮಿತಿಯಲ್ಲಿನ ಸ್ಥಾನವನ್ನು ತೊರೆಯಬೇಕಾಗುತ್ತದೆ.

ಜಯ್ ಶಾ ಬದಲಿಗೆ ರೋಹನ್ ಜೇಟ್ಲಿ ಬಿಸಿಸಿಐ ಕಾರ್ಯದರ್ಶಿ

ಇನ್ನು ಕೆಲವೇ ದಿನಗಳಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಅವರ ಅಧಿಕಾರಾವಧಿ ಮುಗಿಯಲಿದ್ದು, ಅವರ ಸ್ಥಾನಕ್ಕೆ ರೋಹನ್ ಜೇಟ್ಲಿ ಮತ್ತು ಅನಿಲ್ ಪಟೇಲ್ ಪೈಪೋಟಿ ನಡೆಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ರೋಹನ್ ಜೇಟ್ಲಿ ಪ್ರಸ್ತುತ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಅಧ್ಯಕ್ಷರಾಗಿದ್ದರೆ, ಪಟೇಲ್ ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ.

ಮುಂದಿನ ಕಾರ್ಯದರ್ಶಿ ನೇಮಕದ ಕುರಿತು ಚರ್ಚಿಸಲು ಯಾವುದೇ ವಿಶೇಷ ಸಾಮಾನ್ಯ ಸಭೆ (ಎಸ್‌ಜಿಎಂ) ಕರೆಯುವುದಿಲ್ಲ ಎಂದು ವರದಿ ಹೇಳಿದೆ. ಜಯ್ ಶಾ ಬದಲಿಗೆ ರೋಹನ್ ಜೇಟ್ಲಿ ಬರುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ಹೇಳಿದೆ.

ಸದಾ ಅಧಿಕಾರದಲ್ಲಿನ ವಂಶ ಪಾರಂಪರ್ಯದ ವಿರುದ್ಧ ಮಾತನಾಡುವ ಬಿಜೆಪಿಯ ಈ ನಡೆ ಜನರಲ್ಲಿ ಕುತೂಹಲ ಮತ್ತು ಆಶ್ಚರ್ಯವನ್ನು ಏಕಕಾಲದಲ್ಲಿ ಕೆರಳಿಸಿದೆ.

You cannot copy content of this page

Exit mobile version