ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಿಂದ ದಕ್ಷಿಣ ಕನ್ನಡ ಅದರಲ್ಲೂ ವಿಶೇಷವಾಗಿ ಮಂಗಳೂರಲ್ಲಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಆತನ ಕೊಲೆಯ ಬಳಿಕ ದಕ್ಷಿಣ ಕನ್ನಡದ ಹಿಂದುತ್ವ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಹಲವು ಕಡೆ ಬಸ್ ಮತ್ತು ಸಾರಿಗೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಈ ನಡುವೆ ಪೊಲೀಸರು ಸುಹಾಸ್ ಶೆಟ್ಟಿ ಮೇಲೆ ದಾಳಿ ನಡೆಸಿ ಪರಾರಿಯಾದ ಆರೋಪಿಗಳು ಯಾರು ಎಂದು ನಮಗೆ ಗೊತ್ತಾಗಿದೆ. ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡುತ್ತೇವೆ. ಆರೋಪಿಗಳ ಸುಳಿವನ್ನು ಈಗಾಗಲೇ ಪತ್ತೆ ಹಚ್ಚಿಲಾಗಿದೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ. ಕಾನೂನು ಕೈಗೆತ್ತಿಕೊಂಡವರ ಮೇಲೆ ಕಾನೂನು ರೀತಿ ಕ್ರಮ ಆಗಲಿದೆ ಎಂದು ಹಿತೇಂದ್ರ ಹೇಳಿದ್ದಾರೆ.
ಸುಹಾಶ್ ಶೆಟ್ಟಿ ಜೊತಗೆ ಕಾರಿನಲ್ಲಿದ್ದ ಇತರ ನಾಲ್ವರಿಂದಲು ಮಾಹಿತಿ ಕಲೆಹಾಕಲಾಗಿದೆ. ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಇದೀಗ ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ಕಾರ್ಯನಿರ್ವಹಿಸಲಿದೆ ಎಂದು ಹಿತೇಂದ್ರ ಹೇಳಿದ್ದಾರೆ.
ನಿನ್ನ(ಮೇ.01) ರಾತ್ರಿ ಸುಹಾಸ್ ಶೆಟ್ಟಿ ಹಾಗೂ ಮತ್ತೆ ಐವರು ಸಂಚರಿಸುತ್ತಿದ್ದ ಇನೋವಾ ಕಾರನ್ನು ಅಡ್ಡಗಟ್ಟಿ ಅಪರಿಚಿತರು ದಾಳಿ ನಡೆಸಿದ್ದರು. ದಾಳಿಗೆ ಬಳಸಿದ್ದ ಮೀನನ ವಾಹನ , ಸ್ವಿಫ್ಟ್ ಕಾರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಗೆ ಬಳಸಿದ ಕಾರಿನಲ್ಲಿ ಆಯುಧಗಳು ಪತ್ತೆಯಾಗಿದೆ. ಇತ್ತ ಸುಹಾಸ್ ಶೆಟ್ಟಿಯ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.