Friday, August 16, 2024

ಸತ್ಯ | ನ್ಯಾಯ |ಧರ್ಮ

18 ವರ್ಷದ ತುಂಬಿದ ಎಲ್ಲ ಮಹಿಳೆಯರಿಗೂ ಪ್ರತಿ ತಿಂಗಳು 1000 ರೂ: ಎಎಪಿಯಿಂದ ಘೋಷಣೆ

ನವದೆಹಲಿ: ದೆಹಲಿಯಲ್ಲಿ ವಾಸವಿರುವ 18 ವರ್ಷದ ತುಂಬಿದ ಎಲ್ಲ ಮಹಿಳೆಯರಿಗೂ ಪ್ರತಿ ತಿಂಗಳು 1000 ರೂ: ಎಎಪಿಯಿಂದ ಏಂದು ದೆಹಲಿ ಹಣಕಾಸು ಸಚಿವ ಅತಿಶಿ ಇಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.


ಅವರು ಇಂದು ₹76,000 ಕೋಟಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಮಾತನಾಡಿ, ದೆಹಲಿ ಸರ್ಕಾರವು ‘ಮುಖ್ಯಮಂತ್ರಿ ಸಮ್ಮಾನ್’ ಯೋಜನೆ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ತಿಂಗಳಿಗೆ ₹1,000 ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲಿದೆ ಎಂದರು.


ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ 10ನೇ ಬಜೆಟ್ ಇದಾಗಿದೆ. ದೆಹಲಿ ವಿಧಾನಸಭೆಯಲ್ಲಿ ಘೋಷಣೆ ಮಾಡಿದ ಸಚಿವೆ ಅತಿಶಿ, ಹಿಂದೆ, ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದ ದೆಹಲಿಯ ನಿವಾಸಿಗಳು ತಮ್ಮ ಪುತ್ರರನ್ನು ಖಾಸಗಿ ಶಾಲೆಗಳಿಗೆ ಮತ್ತು ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದರು. ಹಾಗಾಗಿ ಮಹಿಳೆಯರ ಶಿಕ್ಷಣ ಮತ್ತು ಬದುಕಿಗೆ ಉತ್ತೇಜ ನೀಡಲು ಈ ಯೀಜನೆ ಜಾರಿಗೊಳಿಸುತ್ತಿದ್ದೇವೆ ಎಂದರು.


ಒಮ್ಮೆ 95 ಪ್ರತಿಶತ ಹುಡುಗಿಯರು ತಮ್ಮ ಸಹೋದರರು ಖಾಸಗಿ ಶಾಲೆಗಳಲ್ಲಿ ಓದುತ್ತಾರೆ ಎಂದು ನನಗೆ ಹೇಳಿದರು. ಆದರೆ, ಈಗ ದೆಹಲಿಯ ಸರ್ಕಾರಿ ಶಾಲೆಗಳ ಹುಡುಗಿಯರು ಐಐಟಿ, ನೀಟ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ’ ಎಂದು ಅವರು ಹೇಳಿದರು.
ಇದುವರೆಗೆ ಶ್ರೀಮಂತ ಕುಟುಂಬದ ಮಗು ಶ್ರೀಮಂತಿಕೆ ಮತ್ತು ಬಡ ಕುಟುಂಬದ ಮಗು ಬಡತನ ಅನುಭವಿಸುವುದು ರೂಢಿಯಾಗಿತ್ತು.. ಆದರೆ ಇದು ‘ರಾಮ ರಾಜ್ಯ’ ಪರಿಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿದೆ. ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ… ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ.ಗಳನ್ನು ಒದಗಿಸಿದೆ’ ಎಂದು ದೆಹಲಿ ಹಣಕಾಸು ಸಚಿವರು ಸರ್ಕಾರದ ಸಾಧನೆಗಳನ್ನು ಹಂಚಿಕೊಂಡರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page