ಟ್ರಂಪ್ ವಿಜಯದ ನಡುವೆಯೇ ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ

ಬೆಂಗಳೂರು : ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ ಡಾಲರ್ ಸೂಚ್ಯಂಕವು ಬಲಗೊಳ್ಳುತ್ತಿರುವ ಒತ್ತಡದಿಂದ ಬುಧವಾರ, ನವೆಂಬರ್ 6 ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ 84.282 ರುಪಾಯಿಗೆ ಕುಸಿಯಿತು. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಕಾರಣ ಅವರ ಹಣದುಬ್ಬರ ನೀತಿಗಳು ಡಾಲರ್‌ನ ಬಲವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬ ನಿರೀಕ್ಷೆಗಳ ಹಿನ್ನಲೆಯಲ್ಲಿ ಭಾರತೀಯ ರುಪಾಯಿ ಡಾಲರ್‌ ಎದುರು ಕುಸಿದಿದೆ.

ಒಂದೇ ದಿನದಲ್ಲಿ ರೂಪಾಯಿ 17 ಪೈಸೆಯಷ್ಟು ಕುಸಿದಿದೆ. ಇದು ನಾಲ್ಕು ತಿಂಗಳಲ್ಲಿ ಆಗಿರುವ ತೀವ್ರ ಕುಸಿತ. ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಕಿಅಂಶಗಳ ಪ್ರಕಾರ, ರೂಪಾಯಿಯು ಪ್ರತಿ ಡಾಲರ್‌ಗೆ 84.295 ರುಪಾಯಿಗೆ ತಲುಪುವ ಮೊದಲು 84.33 ರುಪಾಯಿಯ ದಿನದ ಅಂತರವನ್ನು ತಲುಪಿತು ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ . ಫಾರೆಕ್ಸ್ ಡೀಲರ್‌ಗಳು ಮುಂಬರುವ ದಿನಗಳಲ್ಲಿ ರೂಪಾಯಿಯಲ್ಲಿ ಮತ್ತಷ್ಟು ಕುಸಿತವನ್ನು ನಿರೀಕ್ಷಿಸಿದ್ದಾರೆ, ಇದು 84.40 ರುಪಾಯಿಗೆ ತಲುಪುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು