ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕನ ಕಾರ್ ಗೆ ಟ್ರಕ್ ಡಿಕ್ಕಿ ಹೊಡಿದಿದೆ. ನಂತರ ಡಿಕ್ಕಿ ಹೊಡೆದ ಕಾರನ್ನೇ 500 ಮೀಟರ್ ದೂರಕ್ಕೂ ದೂಡಿಕೊಂಡು ಮುಂದೆ ಸಾಗಿದೆ. ಉತ್ತರ ಪ್ರದೇಶದ ಮೈನಪುರಿ ಜಿಲ್ಲೆಯ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಅವರ ಕಾರ್ ಇದಾಗಿದ್ದು, ಘಟನೆ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
“ನಂತರ ಇಟಾವಾ ಮೂಲದ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಈಗಾಗಲೇ ತನಿಖೆ ನಡೆಯುತ್ತಿದೆ” ಎಂದು ಮೈನಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ದೀಕ್ಷಿತ್ ಮಾಹಿತಿ ತಿಳಿಸಿದ್ದಾರೆ.
ಸಹಜವಾದ ಆಕ್ಸಿಡೆಂಟ್ ಮಾದರಿ ಆಗಿದ್ದರೆ ಡಿಕ್ಕಿ ಹೊಡೆದ ಐದು, ಹತ್ತು ಸೆಕೆಂಡುಗಳಲ್ಲಿ ಟ್ರಕ್ ನಿಲ್ಲಿಸಬೇಕಿತ್ತು. ಆದರೆ ಬರೋಬ್ಬರಿ 500 ಮೀಟರ್ ವರೆಗೂ ಕಾರನ್ನು ದೂಡಿಕೊಂಡು ಹೋದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಅಥವಾ ವಯಕ್ತಿಕ ದ್ವೇಷ ಪ್ರೇರಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಪೊಲೀಸರು ಸೂಕ್ತ ತನಿಖೆ ಮೂಲಕ ಇದರ ಬಗ್ಗೆ ಮಾಹಿತಿ ಕಲೆಹಾಕಬೇಕೆಂದು ಆಗ್ರಹಿಸಿದ್ದಾರೆ.