ಉಡುಪಿ : ಅಕ್ಟೋಬರ್ 7 ರಿಂದ 14 ರವರೆಗೆ ಉಡುಪಿ, ಕಾಪು, ಕುಂದಾಪುರ ವ್ಯಾಪ್ತಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರೊಂದಿಗೆ ಯಾರಾದಾರೂ ಸೆಲ್ಫೀ ತೆಗೆದು ಕಳುಹಿಸಿದ ಐವರು ವಿಜೇತರಿಗೆ ತಲಾ 5000ರೂ ಬಹುಮಾನವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಯುವಮುಖಂಡ ಮಿಥುನ್ ರೈ ಘೋಷಣೆ ಮಾಡಿದ್ದಾರೆ.
ಮಂಗಳವಾರದಂದು ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಉಡುಪಿ ಪ್ರಮುಖ ರಸ್ತೆ ದುರಸ್ತಿಗೆ ಆಗ್ರಹಿಸಿ ರಾಜ್ಯ ಸರ್ಕಾರ ಮತ್ತು ಉಡುಪಿ ನಗರಸಭೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕಲ್ಮಣ್ ಜಂಕ್ಷನ್‌ನಿಂದ ಕರಾವಳಿ ಬೈಪಾಸ್‌ವರೆಗೆ ಪಾದಯಾತ್ರೆ ನಡೆಸಿದ್ದಾರೆ.
ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಿಥುನ್ ರೈ ಅವರು ದಸರಾ ಬಳಿಕ ಶೋಭಾ ಕರಂದ್ಲಾಜೆಯವರು ಕ್ಷೇತ್ರದಲ್ಲಿ ಕಂಡುಬಂದಲ್ಲಿ ಅವರೊಂದಿಗೆ ಸೆಲ್ಫೀ ತೆಗೆದು ಕಳುಹಿಸಿ. ವಿಜೇತರಾದ ಐವರಿಗೆ ತಲಾ ಐದು ಸಾವಿರ ಬಹುಮಾನವಾಗಿ ಕೊಡಲಾಗುವುದು. ಒಂದು ವೇಳೆ ಅ.14 ರ ನಂತರವೂ ಸಂಸದರು ಕ್ಷೇತ್ರದಲ್ಲಿ ಕಾಣದೆ ಇದ್ದರೆ ಎಲ್ಲಾ ಪೋಲೀಸ್ ಠಾಣೆಗಳಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಲಾಗುವುದು ಎಂದು ಹೇಳಿದರು
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi
ಇದನ್ನು ನೋಡಿ : ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್ ರಾಥೋಡ್ ಅವರ ವಿಶ್ಲೇಷಣೆ ಇಲ್ಲಿದೆ.