ಭಾರತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಸನಾತನಿ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿದ ಘಟನೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ವಕೀಲರು ಚರ್ಚೆಯ ಸಮಯದಲ್ಲಿ ವೇದಿಕೆಯ ಬಳಿ ಬಂದು ತಮ್ಮ ಶೂ ಎಸೆಯಲು ಪ್ರಯತ್ನಿಸಿದರು, ಆದರೆ ತತ್‌ಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ಸಮಯಕ್ಕೆ ಸರಿಯಾಗಿ ತಡೆದರು.
ಕೋರ್ಟಿನ ಚರ್ಚೆಯ ಸಮಯದಲ್ಲಿ ಸಿಜೆಐ ಗವಾಯಿ ಅವರ ವಿರುದ್ಧ ಘೋಷಣೆ ಕೂಗುತ್ತ “ಸನಾತನ ಧರ್ಮಕ್ಕೆ ಆಗಿರುವ ಅವಮಾನವನ್ನು ನಾವು ಸಹಿಸುವುದಿಲ್ಲ” ಎಂದು ಕೂಗಿದರು. ಘಟನೆಯ ಉದ್ದಕ್ಕೂ ಸಿಜೆಐ ಗವಾಯಿ ತಮ್ಮ ಶಾಂತತೆಯನ್ನು ಕಾಯ್ದುಕೊಂಡರು ಮತ್ತು “ನಮಗೆ ಇದರಿಂದ ತೊಂದರೆಯಾಗಿಲ್ಲ; ನೀವು ನಿಮ್ಮ ವಾದಗಳನ್ನು ಮುಂದುವರಿಸಬಹುದು” ಎಂದು ವಾದವನ್ನು ಮುಂದುವರೆಸಲು ಹೇಳಿದರು.