ಕಾಂಗ್ರೆಸ್ ನ ಭದ್ರಕೋಟೆ ಎಂದೇ ಹೆಸರಾಗಿದ್ದ ಸಂಡೂರು ಉಪಚುನಾಣೆ ಕಣದಲ್ಲಿ ಕಾಂಗ್ರೆಸ್ ನ ಅನ್ನಪೂರ್ಣ ತುಕಾರಾಮ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಭದ್ರಕೋಟೆ ಎಂಬ ಬಿರುದನ್ನು ಹಾಗೇ ಉಳಿಸಿಕೊಂಡ ಕೀರ್ತಿ ಅನ್ನಪೂರ್ಣ ತುಕಾರಾಮ್ ಅವರಿಗೆ ಸಂದಿದೆ.
ಸಂಡೂರಿನಲ್ಲಿ 16 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ 8,881 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ – 83,368 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತು – 74,487 ಮತ ಪಡೆದಿದ್ದಾರೆ.
ಫಲಿತಾಂಶಕ್ಕೂ ಮೊದಲೇ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಸೋಲೊಪ್ಪಿಕೊಂಡು, ಸೋಲಿನ ಹೊಣೆಯನ್ನು ಹೊತ್ತಿದ್ದಾರೆ.