ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇರಳದ ಮಾಜಿ ಶಾಸಕ ಕೆ. ಮೊಹಮ್ಮದ್ ಅಲಿ ನಿಧನರಾಗಿದ್ದಾರೆ.
76 ವರ್ಷ ವಯಸ್ಸಿನ ಈ ಹಿರಿಯ ನಾಯಕ ಕೇರಳದ ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಕಿಡ್ನಿ ಸಂಬಂಧಿ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಒಕ್ಕೂಟದ ಮೂಲಕ ರಾಜಕೀಯ ಪ್ರವೇಶಿಸಿದ್ದ ಇವರು 1980-2006ರ ಸಮಯದಲ್ಲಿಸತತವಾಗಿ ವಿಧಾನಸಭೆ ಚುನಾವಣೆ ಗೆದ್ದು ಶಾಸಕರಾಗಿದ್ದರು. ಆಲುವಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಇವರು ಕೇರಳ ಪ್ರದೇಶ ಕಾಂಗ್ರೆಸ್ಸಿನ ವಿವಿಧ ಹುದ್ದೆಯ ಜವಬ್ದಾರಿಗಳನ್ನು ಸಹ ನಿಭಾಯಿಸಿದ್ದರು.
ಅವರ ನಿಧನಕ್ಕೆ ಸ್ಪೀಕರ್ ಎ.ಎನ್ ಶಂಸೀರ್ ಸಂತಾಪ ಸೂಚಿಸಿದ್ದಾರೆ. ‘ಉತ್ತಮ ಶಾಸಕರಲ್ಲದೆ ಲೇಖಕರೂ, ಜನಪ್ರಿಯ ನಾಯಕರೂ ಆಗಿದ್ದರು’ ಎಂದು ಶಂಸೀರ್ ಹೇಳಿದರು.