Home ವಿದೇಶ ರಷ್ಯಾ-ಉಕ್ರೇನ್ ಗಡಿ ಯುದ್ಧ ವಲಯದಲ್ಲಿ ಹಲವಾರು ಭಾರತೀಯರು ಕಾಣೆ

ರಷ್ಯಾ-ಉಕ್ರೇನ್ ಗಡಿ ಯುದ್ಧ ವಲಯದಲ್ಲಿ ಹಲವಾರು ಭಾರತೀಯರು ಕಾಣೆ

0

ನವದೆಹಲಿ: ರಷ್ಯಾದ ಸೇನೆಗೆ ಅಕ್ರಮವಾಗಿ ಸೇರ್ಪಡೆಗೊಂಡ ಬಳಿಕ ಉಕ್ರೇನ್-ರಷ್ಯಾ ಗಡಿಗೆ ಕಳುಹಿಸಲಾಗಿರುವ ಹಲವಾರು ಭಾರತೀಯರು ನಾಪತ್ತೆಯಾಗಿದ್ದಾರೆ.

ಇಬ್ಬರು ನಾಪತ್ತೆಯಾದವರ ಕುಟುಂಬದ ಸದಸ್ಯರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾತುಕತೆ ನಡೆಸಿದ್ದು, ಕನಿಷ್ಠ 15 ಭಾರತೀಯರು ಇನ್ನೂ ಪತ್ತೆಯಾಗಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ .

ನಾಪತ್ತೆಯಾದವರಲ್ಲಿ ಒಬ್ಬರು ಜಹೂರ್ ಶೇಖ್ (27) ಡಿಸೆಂಬರ್ 31, 2023 ರಂದು ಕೊನೆಯ ಬಾರಿಗೆ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು ಎಂದು ಅವರ ತಂದೆ ಜಮ್ಮು ಮತ್ತು ಕಾಶ್ಮೀರದ ತಂಗ್‌ಧಾರ್‌ನ ಕುಪ್ವಾರ ನಿವಾಸಿ ಮೊಹಮ್ಮದ್ ಅಮೀನ್ ಶೇಖ್ (65) ಹೇಳಿದ್ದಾರೆ.

“ತಾನು ತರಬೇತಿಗೆ ಹೋಗುತ್ತಿದ್ದೇನೆ ಮತ್ತು ಮುಂದಿನ ಮೂರು ತಿಂಗಳು ಫೋನ್‌ನಲ್ಲಿ ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು. ಆದರೆ ಜನವರಿಯಲ್ಲಿ ರಷ್ಯಾದಲ್ಲಿ ಭಾರತೀಯರ ಸಾವಿನ ಬಗ್ಗೆ ನಮಗೆ ಸುದ್ದಿ ಬರಲು ಪ್ರಾರಂಭಿಸಿದ ಮೇಲೆ, ನಾವು ಆತಂಕಗೊಂಡಿದ್ದೇವೆ ಮತ್ತು ಅವರಿಗೆ ಫೋನ್ ಮಾಡಿದೆವು. ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವರಿಂದ ಇನ್ನೂ ಕರೆ ಬಂದಿಲ್ಲ,” ಎಂದು ನಿವೃತ್ತ ಸರ್ಕಾರಿ ಅಧಿಕಾರಿ ಶೇಖ್ ಹೇಳಿದ್ದಾರೆ.

“ನಾವು ರಷ್ಯಾದ ರಾಯಭಾರ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಕನಿಷ್ಠ 15 ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಎಂಇಎ ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ರಷ್ಯಾ ಸರ್ಕಾರವು ಸಹಕಾರ ನೀಡಿದರೂ, ಗ್ರೌಂಡಿನಲ್ಲಿರುವ ಅವರ ಕಮಾಂಡರ್‌ಗಳು ಸ್ಪಂದಿಸುತ್ತಿಲ್ಲ,” ಎಂದು ಜಹೂರ್ ಅವರ ಹಿರಿಯ ಸಹೋದರ ಐಜಾಜ್ ಅಮೀನ್ (31) ಹೇಳಿದ್ದಾರೆ.

ರಷ್ಯಾದಲ್ಲಿ ಭದ್ರತಾ ಸಹಾಯಕನ ಉದ್ಯೋಗದ ಭರವಸೆ ನೀಡಿದ್ದ ಯೂಟ್ಯೂಬ್ ವೀಡಿಯೊವನ್ನು ನೋಡಿದ ನಂತರ ಜಹೂರ್ ಅವರು ರಷ್ಯಾಕ್ಕೆ ಹೋಗಿದ್ದಾರೆ, ಆ ನಂತರ ಅವರು ರಷ್ಯಾದ ಸೈನ್ಯಕ್ಕೆ ಸೇರಲು ವಂಚನೆಗೆ ಒಳಗಾದರು ಎಂದು ಐಜಾಜ್‌ ಹೇಳಿದ್ದಾರೆ.

ಇದೇ ರೀತಿಯ ಪ್ರಕರಣದಲ್ಲಿ ಪಂಜಾಬ್‌ನ ಜಲಂಧರ್ ನಿವಾಸಿ ಮಂದೀಪ್ (30) ಎಂಬವರ ಜೊತೆಗೆ ಅವರ ಕುಟುಂಬ ಸದಸ್ಯರು ಮಾರ್ಚ್ 3 ರಂದು ಕೊನೆಯದಾಗಿ ಮಾತನಾಡಿದ್ದರು.

“ನಾವು ಕೊನೆಯದಾಗಿ ಮಾರ್ಚ್ 3 ರಂದು ಮಾತನಾಡಿದ್ದೆವು. ಅವರು ಮೊದಲು ಅರ್ಮೇನಿಯಾಗೆ ಹೋದರು ಮತ್ತು ಕೆಲಸ ಹುಡುಕಿಕೊಂಡು ಅಲ್ಲಿಂದ ಇಟಲಿಗೆ ಹೋಗಬೇಕಿತ್ತು. ಅದರ ಬದಲಾಗಿ, ಅವರು ರಷ್ಯಾಕ್ಕೆ ಹೋಗುವಂತೆ ಏಜೆಂಟ್ ಮೋಸ ಮಾಡಿದ. ರಷ್ಯಾದ ಸೈನ್ಯಕ್ಕೆ ಸೇರಲು ಒತ್ತಾಯಿಸಲಾಯಿತು. ಕೆಲವು ದಿನಗಳ ತರಬೇತಿಯ ನಂತರ ಅವರನ್ನು ಯುದ್ಧ ಬೂಮಿಗೆ ಕಳುಹಿಸಲಾಯಿತು” ಎಂದು ಮಂದೀಪ್‌ ಅವರ ಸಹೋದರ ಜಗದೀಪ್ ಕುಮಾರ್ ಹೇಳಿದರು.

You cannot copy content of this page

Exit mobile version