Sunday, April 28, 2024

ಸತ್ಯ | ನ್ಯಾಯ |ಧರ್ಮ

‘ಷಡ್ಜ ಗೋಡ್ಕಿಂಡಿ’ ಅವರಿಗೆ ಕಲಾಚೇತನ ಪ್ರಶಸ್ತಿ

ಗದಗ: ನವೆಂಬರ್‌ 6 ರಂದು ನಡೆಯಲಿರುವ ‘ಕಲಾಚೇತನ ಸಾಂಸ್ಕೃತಿಕ ಅಕಾಡೆಮೆಯ’ ಬೆಳ್ಳಿಹಬ್ಬ ಸಂಭ್ರಮದಲ್ಲಿ, ಕೊಳಲು ವಾದಕರಾದ ‘ಶ್ರೀ ಷಡ್ಜ ಗೋಡ್ಕಿಂಡಿ’ ಅವರಿಗೆ ಕಲಾಚೇತನ ಪ್ರಶಸ್ತಿ ಘೋಷಿಸಲಾಗಿದೆ.

ಕಲಾಚೇತನ ಸಾಂಸ್ಕೃತಿಕ ಅಕಾಡೆಮೆಯು ಕಳೆದ 25 ವರ್ಷಗಳಿಂದ ಅಪೂರ್ವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದು, ಉತ್ತರ ಕರ್ನಾಟಕದ ಸಾಂಸ್ಕೃತಿಕ ಪ್ರಜ್ಞೆಯನ್ನು ಹೆಚ್ಚಿಸುತ್ತಲೇ ಬಂದಿದೆ.

ಗದಗ ಜಿಲ್ಲೆಯ ಸಾಹಿತ್ಯಿಕ-ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಕಲಾಚೇತನದ 25 ವರ್ಷಗಳ ಸಾಧನೆಯ ಸವಿನೆನಪಿಗಾಗಿ ಕಲಾಚೇತನ ಬೆಳ್ಳಿಹಬ್ಬ ಸಂಭ್ರಮವನ್ನು ಏರ್ಪಡಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯುತ್ತಿರುವ ʼಬೆಳ್ಳಿಹಬ್ಬʼ ಸಂಭ್ರಮವು ಗದಗ ಜಿಲ್ಲೆಯ ಶ್ರೀ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ನವೆಂಬರ್‌ 6ರಂದು ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ಈ ಬೆಳ್ಳಿ ಸಂಭ್ರಮದಲ್ಲಿ ಗದಗಿನ ಶಿವಾನಂದ ಬ್ರಹ್ಮಮಠದ ಸದಾಶಿವನಂದ ಭಾರತಿ ಮಹಾಸ್ವಾಮಿಗಳು, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್‌,ಖ್ಯಾತ ವಾಗ್ಮಿಗಳಾದ ಡಾ. ಗುರುರಾಜ ಕರ್ಜಗಿ, ಅಂತರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಕಲಾವಿದರಾದ ಪದ್ಮಶ್ರೀ ಪಂ.ವೆಂಕಟೇಶ ಕುಮಾರ ಮತ್ತಿತರರು ಭಾಗವಹಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು