Home ಸಿನಿಮಾ ರಾಜ್ ಕುಂದ್ರಾ ಟ್ವೀಟ್: ವಿಚ್ಛೇದನ ಪಡೆದ ಸ್ಟಾರ್ ಹೀರೋಯಿನ್ ಶಿಲ್ಪಾ ಶೆಟ್ಟಿ?

ರಾಜ್ ಕುಂದ್ರಾ ಟ್ವೀಟ್: ವಿಚ್ಛೇದನ ಪಡೆದ ಸ್ಟಾರ್ ಹೀರೋಯಿನ್ ಶಿಲ್ಪಾ ಶೆಟ್ಟಿ?

0

ಬಾಲಿವುಡ್ ಸ್ಟಾರ್ ಹೀರೋಯಿನ್ ಶಿಲ್ಪಾ ಶೆಟ್ಟಿ ಪತಿಯಿಂದ ವಿಚ್ಛೇದನ ಪಡೆದಿದ್ದಾರಂತೆ. ಅವರ ಪತಿ ರಾಜ್ ಕುಂದ್ರಾ ಅವರ ಇತ್ತೀಚಿನ ಟ್ವೀಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ಶಿಲ್ಪಾ ಅವರ ಪತಿ ರಾಜ್ ಕುಂದ್ರಾ ತಮ್ಮ ಅಧಿಕೃತ ಖಾತೆಯಲ್ಲಿ ಪ್ರತ್ಯೇಕತೆಯನ್ನು ಘೋಷಿಸಿದ್ದಾರೆ. ಶಿಲ್ಪಾ ಬಗ್ಗೆ ಹೇಳದೆ.. ‘ನಾವು ಬೇರೆಯಾಗಿದ್ದೇವೆ. ದಯವಿಟ್ಟು ಈ ಕಷ್ಟದ ಸಮಯದಲ್ಲಿ ನಮಗೆ ಸಮಯವನ್ನು ನೀಡುವಂತೆ ನಾವು ವಿನಂತಿಸುತ್ತೇವೆ. ಸದ್ಯ ಈ ಟ್ವೀಟ್ ಹರಿದಾಡುತ್ತಿರುವಾಗಲೇ ಇವರಿಬ್ಬರು ಬೇರ್ಪಟ್ಟಿದ್ದಾರಾ?ವಿಚ್ಛೇದನ ಪಡೆದಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಇನ್ನು ಕೆಲವರು ರಾಜ್ ಕುಂದ್ರಾ ಅವರ ಟ್ವೀಟ್ ವಿಚ್ಛೇದನದ ಬಗ್ಗೆ ಅಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಶಿಲ್ಪಾ ಶೆಟ್ಟಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದ ಯಾವುದೇ ಪೋಸ್ಟ್‌ಗಳಿಲ್ಲ. ಅಲ್ಲದೆ.. ಅವರು ಗುರುವಾರ ತಮ್ಮ ಪತಿಯ ಹೊಸ UT69 ಸಿನೆಮಾದ ಪೋಸ್ಟರ್ ಪೋಸ್ಟ್ ಮಾಡಿದ್ದಾರೆ… ರಾಜ್ ಕುಂದ್ರಾ ಅವರಿಗೆ ಶುಭಾಶಯಗಳು‌ ಎಂದು ಪೋಸ್ಟಿನಲ್ಲಿ ಬರೆದಿದ್ದಾರೆ. ಇದರೊಂದಿಗೆ ರಾಜ್ ಕುಂದ್ರಾ ಟ್ವೀಟ್ ಮಾಡಿರುವುದು ಅವರು ಧರಿಸುತ್ತಿದ್ದ ಮಾಸ್ಕ್‌ ಬಗ್ಗೆ ಎನ್ನುವುದು ಸ್ಪಷ್ಟವಾಗಿದೆ.

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009ರಲ್ಲಿ ವಿವಾಹವಾದರು. ಅವರಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ, ರಾಜ್ ಕುಂದ್ರಾ ಅವರು ತಮ್ಮ ಜೀವನಚರಿತ್ರೆ ಯುಟಿ 69ರ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಬ್ಲೂ ಫಿಲಂ ಪ್ರಕರಣದ ನಂತರದ ತಮ್ಮ ಜೈಲು ಜೀವನದ ಬಗ್ಗೆ ಮಾತನಾಡಿದರು. 2021ರಲ್ಲಿ, ರಾಜ್ ಕುಂದ್ರಾ ಅವರನ್ನು ಪೋರ್ನ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿಸಲಾಯಿತು ಮತ್ತು ಕೆಲವು ವರ್ಷಗಳ ಕಾಲ ಜೈಲಿನಲ್ಲಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಜಾಮೀನಿನ ಮೇಲೆ ಹೊರಬಂದಾಗಿನಿಂದ ರಾಜ್ ಮುಖ ತೋರಿಸದೆ ಮಾಸ್ಕ್ ಹಾಕಿಕೊಂಡು ತಿರುಗಾಡುತ್ತಿದ್ದರು. ಹಲವು ದಿನಗಳಿಂದ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದ ರಾಜ್ ಕುಂದ್ರಾ ಇತ್ತೀಚೆಗೆ ಯುಟಿ69 ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಮಾಸ್ಕನ್ನು ತೆಗೆದುಹಾಕಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ ಕುಂದ್ರಾ, “ನಾನು ಬಹಳ ನೋವಿನಿಂದಾಗಿ ಮುಖವಾಡವನ್ನು ಧರಿಸುತ್ತೇನೆ, ಮೀಡಿಯಾ ಟ್ರಯಲ್ ಬಹಳ ನೋವು ಕೊಟ್ಟಿದೆ, ಹಾಗೆ ನೋಡಿದರೆ, ಇದು ನನ್ನ ಕಾನೂನು ವಿಚಾರಣೆಗಿಂತ ಹೆಚ್ಚು ನೋವಿನಿಂದ ಕೂಡಿದೆ, ನಾನು ಮಾಧ್ಯಮಗಳನ್ನು ದೂಷಿಸುವುದಿಲ್ಲ ಏಕೆಂದರೆ ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ನಾನು ಈಗಾಗಲೇ ಮನೆಯಲ್ಲಿ ಒಬ್ಬಳು ಸ್ಟಾರನ್ನು ಹೊಂದಿದ್ದೇನೆ, ಆದರೆ ಈಗ ನನ್ನ ಮಾಸ್ಕ್‌ ಕೂಡಾ ಸ್ಟಾರ್‌ ಆಗಿದೆ. ನಾನು ಪ್ರಾಣ ಬಿಡಬೇಕು ಎಂದುಕೊಂಡಿದ್ದೆ, ಅದಕ್ಕೂ ಮೊದಲು ಈ ಮಾಸ್ಕ್‌ ಬಿಡುತ್ತೇನೆ. ಈ ಮಾಸ್ಕ್‌ ಧರಿಸುವಿಕೆ ನನಗೆ ಬಹಳ ನೋವು ಕೊಡುತ್ತಿದೆ” ಎಂದು ಹೇಳಿಕೊಂಡಿದ್ದರು.

You cannot copy content of this page

Exit mobile version