ಬೆಳಗಾವಿ : ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ (Karnataka Rajyotsava) ಸಂಭ್ರಮ ಮನೆಮಾಡಿದ್ದು, ಸಡಗರದಿಂದ ರಾಜ್ಯೋತ್ಸವ ಆಚರಿಸಲು ಇಡೀ ರಾಜ್ಯ ಸಜ್ಜಾಗಿದ್ದೆ.ಆದ್ರೆ ಪ್ರತಿಬಾರಿ ರಾಜ್ಯೋತ್ಸವದ ವೇಳೆ ಗಡಿ ಜಿಲ್ಲೆ ಬೆಳಗಾವಿ(Belgavi) ಸುದ್ದಿಯಲ್ಲಿರುತ್ತದೆ. ಇದಕ್ಕೆ ಕಾರಣ ಎಂ.ಇ.ಎಸ್ ಪುಂಡರು ಮತ್ತು ಶಿವಸೇನೆ ನಾಯಕರ ಹಾವಳಿ.ಪ್ರತಿ ವರ್ಷ ರಾಜ್ಯೋತ್ಸವದ ಸಂದರ್ಭದಲ್ಲೂ ಎಂಇಎಸ್ ಕಾರ್ಯಕರ್ತರು ಕರಾಳ ದಿನ ಆಚರಿಸಲು ಮುಂದಾಗುವ ಪರಿಣಾಮ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ಹೀಗಾಗಿ ಈ ವರ್ಷವೂ ಈ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಕಾರಣಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮುನ್ನೆಚ್ಚರಿಕೆ ವಹಿಸಿ ಆದೇಶ ಹೊರಡಿಸಿದ್ದಾರೆ.ಶಿವಸೇನೆ ಮುಖಂಡರು ಬೆಳಗಾವಿಯಲ್ಲಿ ನಡೆಯುವ ಕರಾಳ ದಿನದಲ್ಲಿ ಪಾಲ್ಗೊಳ್ಳುವ ಬಗ್ಗೆ ಹೇಳಿಕೆ ನೀಡಿದ್ದರು. ಇದೀಗ 25ಕ್ಕೂ ಹೆಚ್ಚು ಶಿವಸೇನೆಯ ಕಾರ್ಯಕರ್ತರಿಗೆ ಬೆಳಗಾವಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
