ಬಾಗಲಕೋಟೆಯ ಸೋನಾರ ಬಡಾವಣೆಯಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಶಿವಾಜಿ ಮೂರ್ತಿಯನ್ನು ತೆರವುಗೊಳಿಸಲಾಗಿದ್ದು, ಇದನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಈ ಬಂದ್ ಗೆ ಪ್ರತಿಕ್ರಿಯಿಸಿ ಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿ ಬೆಂಬಲ ಸೂಚಿಸಿವೆ. ಎರಡು ದಿನ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹೊಸದಾಗಿ ಸ್ಥಾಪಿಸಲಾದ ಶಿವಾಜಿ ಮೂರ್ತಿ ತೆರವನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಈ ಬಂದ್ ಗೆ ಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿ ಬೆಂಬಲ ಸೂಚಿಸಿವೆ. ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕರ್ನಾಟಕದಲ್ಲಿ ಕನ್ನಡನಾಡಿನ ದೊರೆಗಳ ಪ್ರತಿಮೆಗಳನ್ನು ಸ್ಥಾಪಿಸದೆ ಮರಾಠ ರಾಜ ಶಿವಾಜಿಯ ಪ್ರತಿಮೆ ಸ್ಥಾಪಿಸಿದ್ದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಮೆಯ ತೆರವಿಗೆ ಆಗ್ರಹಿಸಿದ್ದವು. ಬಾಗಲಕೋಟೆ ನಗರದ ಸೋನಾರ ಬಡಾವಣೆಯಲ್ಲಿ ಸರ್ಕಾರದ ಒಪ್ಪಿಗೆ ಪಡೆಯದೆ ಅನಧಿಕೃತವಾಗಿ ಶಿವಾಜಿ ಪ್ರತಿಮೆಯನ್ನು ರಾತ್ರೋ ರಾತ್ರಿ ಸ್ಥಾಪಿಸಲು ಹೊರಟಿದ್ದರು. ಇದಕ್ಕೆ ತಡೆಯನ್ನು ನೀಡಿರುವ ಸರ್ಕಾರ ಮೂರ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿರುವುದನ್ನು ಕನ್ನಡಪರ ಸಂಘಟನೆಗಳು ಸ್ವಾಗತಿಸಿವೆ.
ರಾತ್ರೋ ರಾತ್ರಿ ಶಿವಾಜಿ ಪ್ರತಿಮೆ ಪ್ರತ್ಯಕ್ಷ!
ಬಾಗಲಕೋಟೆಯ ಸೋನಾರ ಬಡಾವಣೆಯಲ್ಲಿ ಅನುಮತಿ ಇಲ್ಲದೇ ಶಿವಾಜಿ ಪುತ್ಥಳಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ರಾತ್ರಿ ಪ್ರತಿಮೆಯನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಜಿಲ್ಲಾಧಿಕಾರಿ ಕೆಎಂ ಜಾನಕಿ ಪ್ರತಿಮೆಯನ್ನು ಸ್ಥಳಾಂತರಿಸಲು ಆದೇಶ ನೀಡಿ, ಬುಲ್ಡೋಜರ್ ಬಳಸಿ ಶಿವಾಜಿ ಪ್ರತಿಮೆಯನ್ನು ಎತ್ತಂಗಡಿ ಮಾಡಲಾಗಿತ್ತು. ಈ ವೇಳೆ ಹಿಂದುತ್ವವಾದಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಬಾಗಕೋಟೆ ನಗರದಲ್ಲಿ ಸೆಕ್ಷನ್ 144 ಕೂಡ ಜಾರಿಯಾಗಿದೆ.
ಈ ಹಿನ್ನಲೆಯಲ್ಲಿ ಹಿಂದುತ್ವವಾದಿಗಳು ಹಾಗೂ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯಿಂದ ಗಲಭೆ ಸಂಭವಿಸುವ ಸಾಧ್ಯತೆ ಇರುವುದರಿಂದ ಬೆಳಗಾವಿ, ವಿಜಯಪುರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಗಳು ಬಾಗಲಕೋಟೆಯಲ್ಲಿ ಬೆಳಗ್ಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದವು. ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲೆಯ 9 ತಾಲೂಕು ಕೇಂದ್ರಗಳ ತಹಶೀಲ್ದಾರ್‌ಗಳಿಗೆ ಮನವಿ ನೀಡಿದರು.
ಆದರೆ ಈ ಬಂದ್ ಗೆ ಸಾಕಷ್ಟು ಬೆಂಬಲ ವ್ಯಕ್ತವಾಗದೆ ಅನೇಕ ಕಡೆ ಅಂಗಡಿಗಳು ತೆರೆದೇ ಇದ್ದವು. ಪ್ರತಿಭಟನಾಕಾರರು ಬಾಗಿಲು ಮುಚ್ಚದ ಅಂಗಡಿ ಮಾಲೀಕರೊಂದಿಗೆ ವಾಗ್ವಾದಕ್ಕೆ ಇಳಿದು ಬಲವಂತದ ಬಂದ್ ಗೆ ಮುಂದಾಗಿರುವುದು ಕಂಡು ಬಂದಿದೆ. ಬಸ್ ಸಂಚಾರ ಎಂದಿನಂತೆ ನಡೆಯುತ್ತಿದೆ.
ಹಿಂದುತ್ವವಾದಿ ಸಂಘಟನೆಗಳ ಈ ಬಂದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ದನಿ ಎತ್ತಿವೆ. ಪಟ್ಟ ಭದ್ರ ಹಿತಾಸಕ್ತಿಗಳ ಮತ್ತು ಧರ್ಮಾಂದ ಪಕ್ಷದ ಕಾರ್ಯಕರ್ತರು ಸರ್ಕಾರದ ನಡೆ ವಿರೋಧಿಸಿ ಬಾಗಲಕೋಟೆ ನಗರದಲ್ಲಿ ಕೋಮುಪ್ರಚೋದಕಗಳನ್ನ ಮಾಡುತ್ತ ನಗರದಲ್ಲಿ ಅಶಾಂತಿಯನ್ನ ಉಂಟು ಮಾಡುತ್ತಿವೆ. ಹೀಗಾಗಿ ಸರ್ಕಾರ ನಾಡದ್ರೋಹಿಗಳನ್ನು ಹೆಡೆಮುರಿಯನ್ನ ಕಟ್ಟಿ ಶಾಂತಿ ನೆಲಸಬೇಕು, ಪರಕೀಯವಾದದ ಅಶಾಂತಿಯನ್ನ ಸದೆಬಡಿಯಬೇಕು, ಮತ್ತು ಯಾವುದೆ ಕಾರಣಕ್ಕೂ ಅಲ್ಲಿ ಶಿವಾಜಿ ಪ್ರತಿಮೆ ಆಗಕೂಡದು ಎಂದು ನಮ್ಮ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, “ ೩೦0 ವರ್ಷ ಭಾರತವನ್ನ ಬಲಿಷ್ಠವಾಗಿ ಆಳಿದ ಚಾಲುಕ್ಯರ ಒಂದೆ ಒಂದು ಪ್ರತಿಮೆ ಇಡೀ ಕರ್ನಾಟಕದಲ್ಲೆ ಇಲ್ಲ! ರಾಜಕಾರಣಿಗಳಿಗೆ ಇದು ಕಾಣಲಿಲ್ಲ! ಧರ್ಮಾಧಾರಿತ ರಾಜಕೀಯ ಮಾತ್ರ ಕಂಡದ್ದು ಕನ್ನಡಿಗರ ದುರಂತ!” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.