Home ರಾಜಕೀಯ ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ, ಅವರ ಮುಂದಿನ ಸಿನಿಮಾಗಳನ್ನು ನಿಷೇಧಿಸಿ : ಫಿಲಂ ಚೇಂಬರ್ ಗೆ...

ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ, ಅವರ ಮುಂದಿನ ಸಿನಿಮಾಗಳನ್ನು ನಿಷೇಧಿಸಿ : ಫಿಲಂ ಚೇಂಬರ್ ಗೆ ಪತ್ರ ಬರೆದ ಸಚಿವ ಶಿವರಾಜ ತಂಗಡಗಿ

0

ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚಿಸುವುದಿಲ್ಲ ಎಂದು ಪಟ್ಟು ಹಿಡಿದು ಕೂತ ಕಮಲ್ ಹಾಸನ್ ಗೆ ಸಧ್ಯ ಕರ್ನಾಟಕದಲ್ಲಿ ಅವರ ಮುಂದಿನ ಸಿನಿಮಾ ಬಿಡುಗಡೆಯ ಅನುಮಾನ ಎದ್ದು ಕಾಣುತ್ತಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಕರ್ನಾಟಕ ಫಿಲಂ ಚೇಂಬರ್ ಗೆ ಪತ್ರ ಬರೆದಿದ್ದು, ಕಮಲ್ ಹಾಸನ್ ಮುಂದಿನ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದಂತೆ ತಡೆ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

ಕಮಲ್ ಹಾಸನ್ ಅವರಂತಹ ನಟರೊಬ್ಬರು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ, ವಿಶೇಷವಾಗಿ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಅವರು ಹೇಳಿದರು. ಕನ್ನಡ ನೆಲ, ಜಲ, ಭಾಷೆಯ ವಿಷಯ ಬಂದಾಗ ಇಂತಹ ಹೇಳಿಕೆಗಳನ್ನು ಯಾರು ಮಾಡಿದರೂ ಸಹಿಸುವುದಿಲ್ಲ. ಕಮಲ್ ಹಾಸನ್ ಕ್ಷಮೆಯಾಚಿಸಬೇಕು’ ಎಂದು ಶಿವರಾಜ್ ತಂಗಡಗಿ ಆಗ್ರಹಿಸಿದ್ದಾರೆ.

ಕೆಎಫ್ ಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ತಂಗಡಗಿ, ಕಮಲ್ ಹಾಸನ್ ಅವರ ಅವಹೇಳನಕಾರಿ ಹೇಳಿಕೆ ನನ್ನನ್ನೂ ಒಳಗೊಂಡಂತೆ ಎಲ್ಲ ಕನ್ನಡಿಗರಿಗೆ ನೋವುಂಟು ಮಾಡಿದೆ ಮತ್ತು ಅವರ ಭಾವನೆಗಳಿಗೆ ನೋವುಂಟು ಮಾಡಿದೆ. ಅವರು ಕ್ಷಮೆ ಯಾಚಿಸದಿದ್ದರೆ, ಅವರ ಚಲನಚಿತ್ರಗಳನ್ನು ಕರ್ನಾಟಕದಲ್ಲಿ ತಕ್ಷಣ ನಿಷೇಧಿಸಬೇಕು ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಮುಂದಿನ ಸಿನಿಮಾ ಥಗ್ ಲೈಫ್ ನ ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ ಕನ್ನಡವು ತಮಿಳಿನಿಂದ ಹುಟ್ಟಿದೆ ಎಂದು ಕಮಲ್ ಹಾಸನ್ ಹೇಳಿ ವಿವಾದ ಸೃಷ್ಟಿಸಿದ್ದರು. ಇದರಿಂದ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆಗಳು ತರಾಟೆಗೆ ತೆಗೆದುಕೊಂಡರೂ ಹಾಗೂ ಅವರ ಚಲನಚಿತ್ರಗಳನ್ನು ಬಹಿಷ್ಕರಿಸಲು ಕರೆ ನೀಡಿದರೂ ಸಹ ಅವರು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ. ಅವರು ಹೇಳಿದ್ದು “ಪ್ರೀತಿಯಿಂದ” ಮತ್ತು “ಪ್ರೀತಿ ಎಂದಿಗೂ ಕ್ಷಮೆಯಾಚಿಸುವುದಿಲ್ಲ” ಎಂದು ಹೇಳಿದರು.

You cannot copy content of this page

Exit mobile version