ಹನಿಗವಿತೆಗಳು

0

ಖ್ಯಾತ ಕವಿ ಸುಕನ್ಯಾ ಕಳಸ ಅವರ ಮೂರು ಹನಿಗವಿತೆಗಳು ನಿಮ್ಮ ಭಾನುವಾರದ ಓದಿಗೆ…

ಮುಯ್ಯಿ

ಬೇರೆಯವರ ಹೆಂಡತಿಯರು 

ಸದಾ ಪರಮ ಸುಂದರಿಯರು

ಕಣ್ಗೆ ತಂಪು ಮನಕೆ ಸೊಂಪು

ಕುಡಿದ ಹಾಗೆ ಬೀರು

ಎಂದು ಹೇಳುತಿದ್ದರು 

ರಸಿಕ ಮಹಾಶಯರು

ದಿನಾ ಇದನೆ ಕೇಳಿ ಕೇಳಿ 

ಕೊನೆಗೆ ಬಾಯಿಬಿಟ್ಟರು

ಗರತಿ ಗೌರಮ್ಮನಂಥ ಅವರ 

ಶ್ರೀಮತಿಯವರು

“ನಿಜವೇ ಕಣ್ರೀ ನಿಮ್ಮ ಮಾತು ನೂರಕ್ಕೆ ನೂರು

ಇದನೇ ದಿನಾ ಹೇಳುವರು

ನನಗೆ ನಿಮ್ಮ ಗೆಳೆಯರು

ನೀವಿಲ್ಲದ ಹೊತ್ತಿನಲ್ಲಿ 

ನಿತ್ಯ ಮನೆಗೆ ಬರುವರು

ನನ್ನ ಅಂದ ಚಂದವನ್ನು ಹಾಡಿ ಹಾಡಿ ಹೊಗಳುವರು!”

ಇಂಥ ಮಾತು ಕೇಳಿದಂಥ 

ರಸಿಕ ಮಹಾಶಯರು

ಕಣ್ಣು ಕತ್ತಲಿಟ್ಟು ಕೊನೆಗೆ ನಿಂತಲ್ಲಿಯೇ ಕುಸಿದರು!

೨. ಹೊಸ ರುಚಿ

ಇಂಗೂ ಬೇಡ ತೆಂಗೂ ಬೇಡ

ಬರೀ ಪೊರಕೆ ಕೊಟ್ಟು ನೋಡಿ

ಕ್ಷಣದಲಿ ಜಿರಲೆ ಚಟ್ನಿ ರೆಡಿ!!

೩.ಸರಸ್ವತಿ ಫಜೀತಿ

ಆ ಬ್ರಹ್ಮನ ಹೆಂಡತಿ ಸರಸ್ವತಿ ಪಡಬೇಕು ಪಾಪ ಎಂಥಾ ಫಜೀತಿ

ಒಮ್ಮೆ ಬ್ರಹ್ಮನ ಚುಂಬಿಸಲಿಕೂ

ನಾಲ್ಕು ದಿಕ್ಕಿಗೆ ತಿರುಗಬೇಕು!

ಮಂಡೋದರಿಗೋ ಅಂಥಾ ಕಷ್ಟವೇನಿರಲಿಲ್ಲ

ಸಾಲಾಗೇ ಇದ್ದುವಲ್ಲ ರಾವಣನ ಹತ್ತು ಮುಖಗಳೆಲ್ಲಾ!!

ಸುಕನ್ಯಾ ಕಳಸ

You cannot copy content of this page

Exit mobile version