ಬ್ರಿಟಿಷರ ಗುಲಾಮ RSS ನಿಂದ ನಾವ್ ಕಲೀಬೇಕಾ – ಪ್ರಿಯಾಂಕ್ ಖರ್ಗೆ ಗರಂ

ಬೆಂಗಳೂರು: ಪೊಲೀಸ್ ಇಲಾಖೆ ಅವರ ಮನೆ ಆಳು ಮಕ್ಕಳಾ? ಮಾಹಿತಿ ಕೊಟ್ಟಿದ್ದೇವೆ, ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಅನ್ನೋದಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಮಾಧ್ಯಮದವರೊಂದಿಗೆ ಆರ್‌ಎಸ್‌ಎಸ್‌ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ನಾವು ಕೇಳಿರೋದರಲ್ಲಿ ತಪ್ಪೇನಿದೆ? ಏನಾದರೂ ಲೋಪ ಇದ್ರೆ ನಾವು ತಿದ್ದಿಕೊಳ್ಳುತ್ತೇವೆ. ಬಹಳಷ್ಟು ಕಡೆ ಆರ್‌ಎಸ್‌ಎಸ್ ಪಥಸಂಚಲದ ಬಗ್ಗೆ ಮಾಹಿತಿಗಾಗಿ ಅಂತ ಕೊಡ್ತಾ ಇದ್ದಾರೆ. ಮಾಹಿತಿಗಾಗಿ ಬೇಡ, ದಯವಿಟ್ಟು ಅನುಮತಿಗಾಗಿ ಅಂತ ಕೇಳಿ, ನಾವು ಮಾಡುತ್ತೇವೆ. ಅನುಮತಿ ಕೇಳಲಿ. ಅದರಲ್ಲಿ ಮಾಹಿತಿಗಾಗಿ ಅಂತ ಬರೆದಿದೆ, ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ? ಎಂದು ಆಗ್ರಹಿಸಿದ್ದಾರೆ.

ಮಾಹಿತಿ ಕೊಟ್ಟಿದ್ದೇವೆ. ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳೋದಲ್ಲ. ಬಹಳ ಜನ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ನೀವು ಅನುಮತಿ ಕೇಳಿ, ಸೂಕ್ತ ಅನಿಸಿದ್ರೆ ಭದ್ರತೆ ಕೊಡ್ತೀವಿ. ಗಣಪತಿ ಹಬ್ಬ, ಮನೆ ಕಾರ್ಯಕ್ರಮ ಅಂತ ಅನುಮತಿ ಕೇಳ್ತೀರಾ ಅಲ್ವಾ? ನಿಮಗೆ ಏನು ಕಾನೂನು ಅನ್ವಯಿಸುತ್ತದೆ, ಅದೇ ಆರ್‌ಎಸ್‌ಎಸ್‌ಗೂ ಕೂಡ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಆರ್‌ಎಸ್ಎಸ್ ಪಥಸಂಚಲನಕ್ಕೆ ಸೂಕ್ತವಾಗಿ ಅನುಮತಿ ಕೇಳಬೇಕು. ಬಾಯಿಮಾತಿನಲ್ಲಿ ಹೇಳಿದರೆ ಆಗುವುದಿಲ್ಲ. ನಾನು ಕೇಳಿದ್ರಲ್ಲಿ ತಪ್ಪಿದ್ದರೆ, ಲೋಪ ಇದ್ದರೆ ತಿದ್ದಿಕೊಳ್ಳೋಕೆ ತಯಾರಿದ್ದೀನಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್‌ಎಸ್ಎಸ್ ಪಥಸಂಚಲನ ಮಾಡುವಾಗ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಮಾಹಿತಿ ಬೇಡ, ಅನುಮತಿ ಕೇಳಿ ಪಡೆದುಕೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು