Home ಬ್ರೇಕಿಂಗ್ ಸುದ್ದಿ ಜಿಲ್ಲಾಧಿಕಾರಿಗಳ ಮೇಲಿನ ರೇವಣ್ಣರವರ ಆರೋಪಕ್ಕೆ – ಶ್ರೇಯಸ್ ಪಟೇಲ್ ತಿರುಗೇಟು

ಜಿಲ್ಲಾಧಿಕಾರಿಗಳ ಮೇಲಿನ ರೇವಣ್ಣರವರ ಆರೋಪಕ್ಕೆ – ಶ್ರೇಯಸ್ ಪಟೇಲ್ ತಿರುಗೇಟು

ಹಾಸನ: ಗ್ರಾಮ ಪಂಚಾಯತ್ ಚುನಾವಣಾ ಮೀಸಲಾತಿ ನಿಗದಿ ವಿಚಾರದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಜಿಲ್ಲಾಧಿಕಾರಿಗಳ ವಿರುದ್ಧ ನಡೆಸಿರುವ ಆರೋಪಗಳ ಕುರಿತು ಹಾಸನ ಸಂಸದ ಶ್ರೇಯಸ್ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ.

ಮೀಸಲಾತಿ ನಿಗದಿಪಡಿಸುವುದು ಸಂಪೂರ್ಣವಾಗಿ ಚುನಾವಣಾ ಆಯೋಗದ ಕೆಲಸವಾಗಿದ್ದು, ಯಾರೂ ಇದರಲ್ಲಿ ಮೂಗು ತೂರಿಸುವಂತಿಲ್ಲ ಎಂದು ಶ್ರೇಯಸ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿರುವ ಎಚ್.ಡಿ. ರೇವಣ್ಣ ಅವರು ಜಿಲ್ಲಾಧಿಕಾರಿ ಸ್ಥಾನಕ್ಕೆ ಮತ್ತು ಮಹಿಳಾ ಅಧಿಕಾರಿಗೆ ಕನಿಷ್ಠ ಗೌರವ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಅಸಂಬದ್ಧವಾಗಿ ಹಾಗೂ ಹಗುರವಾಗಿ ಮಾತನಾಡುವುದನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.

You cannot copy content of this page

Exit mobile version