Home ಬ್ರೇಕಿಂಗ್ ಸುದ್ದಿ ಗ್ರಾ.ಪಂ ಅವೈಜ್ಞಾನಿಕ ಮೀಸಲಾತಿ ವಿರೋಧಿಸಿ ಜೆಡಿಎಸ್‌ – ಬೃಹತ್ ಪ್ರತಿಭಟನಾ ಧರಣಿ

ಗ್ರಾ.ಪಂ ಅವೈಜ್ಞಾನಿಕ ಮೀಸಲಾತಿ ವಿರೋಧಿಸಿ ಜೆಡಿಎಸ್‌ – ಬೃಹತ್ ಪ್ರತಿಭಟನಾ ಧರಣಿ

ಹಾಸನ : ಗ್ರಾಮ ಪಂಚಾಯತ್ ಚುನಾವಣೆಗೆ ಅವೈಜ್ಞಾನಿಕವಾಗಿ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಆರೋಪಿಸಿ ಜೆಡಿಎಸ್ ವತಿಯಿಂದ ಹಾಸನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ನಗರದ ಹೇಮಾವತಿ ವೃತ್ತದಿಂದ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಎನ್‌ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸರ್ಕಾರದ ಅಧಿಸೂಚನೆಯಂತೆ ಮೀಸಲಾತಿ ನಿಗದಿ ಮಾಡಿಲ್ಲವೆಂದು ದೂರಿದ ಪ್ರತಿಭಟನಾಕಾರರು, ತಕ್ಷಣವೇ ಈಗಿನ ಮೀಸಲಾತಿ ಪಟ್ಟಿಯನ್ನು ರದ್ದುಪಡಿಸಿ ವೈಜ್ಞಾನಿಕವಾಗಿ ಮರುಪರಿಶೀಲಿಸುವಂತೆ ಆಗ್ರಹಿಸಿದರು.

You cannot copy content of this page

Exit mobile version