Home ಬ್ರೇಕಿಂಗ್ ಸುದ್ದಿ ಹಾಸನ ಡಿಸಿ ವಿರುದ್ಧ ಮತ್ತೆ ಎಚ್‌.ಡಿ.ರೇವಣ್ಣ ಗರಂ – ಅವರು ಕರೆ ಸ್ವೀಕರಿಸಿಲ್ಲ

ಹಾಸನ ಡಿಸಿ ವಿರುದ್ಧ ಮತ್ತೆ ಎಚ್‌.ಡಿ.ರೇವಣ್ಣ ಗರಂ – ಅವರು ಕರೆ ಸ್ವೀಕರಿಸಿಲ್ಲ

ಹಾಸನ: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ. ರೇವಣ್ಣ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿಂದು ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಮೀಸಲಾತಿ ಪಟ್ಟಿ ಸಿದ್ಧಪಡಿಸಿರುವ ವಿಧಾನ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದರು. ನಾನು ಆರ್‌ಟಿಐನಲ್ಲಿ ಮೀಸಲಾತಿ ಪಟ್ಟಿಯನ್ನು ತೆಗೆದುಕೊಂಡಿದ್ದೇನೆ. ಜಿಲ್ಲಾಧಿಕಾರಿಯವರ ವೈಯಕ್ತಿಕ ಫೋನ್‌ಗೆ ಕರೆ ಮಾಡಿದ್ದೇನೆ. ಆದರೆ ಅವರು ಕರೆ ಸ್ವೀಕರಿಸಿಲ್ಲ, ಎಂದು ರೇವಣ್ಣ ಹೇಳಿದರು.

ಅವರು ಐಎಎಸ್ ಮಾಡಿದ್ದಾರೆ. ಆದರೆ ನನ್ನನ್ನು ಜನರು ಆರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಜನರಿಗೆ ನೋವಾದಾಗ ನಾನು ಮಾತನಾಡಲೇಬೇಕು, ಎಂದು ಅವರು ಹೇಳಿದರು. ಮೀಸಲಾತಿ ಪಟ್ಟಿ ಸಿದ್ಧಪಡಿಸುವ ವಿಚಾರದಲ್ಲಿ ತಹಶೀಲ್ದಾರ್‌ಗಳು ಯಾವ ಆಧಾರದ ಮೇಲೆ ಪಟ್ಟಿ ಕಳುಹಿಸಿದರು ಎಂದು ಪ್ರಶ್ನಿಸಿದ ರೇವಣ್ಣ, ಎಲ್ಲಾ ತಹಶೀಲ್ದಾರ್‌ಗಳಿಗೆ ಪ್ರಪೋಸಲ್ ಕಳುಹಿಸಲು ಯಾರು ಹೇಳಿದರು? ಎಂದು ಪ್ರಶ್ನಿಸಿದರು.

ಒಬ್ಬ ರಾಜಕಾರಣಿ ಹೇಳಿದಂತೆ ಮೀಸಲಾತಿ ಪಟ್ಟಿಯನ್ನು ನಿಗದಿ ಮಾಡಿದ್ದಾರೆ. ಆ ರಾಜಕಾರಣಿ ಯಾರು ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ,ಎಂದು ರೇವಣ್ಣ ಹೇಳಿದರು. ಜಿಲ್ಲಾಧಿಕಾರಿಗೆ ಅಧಿಕಾರವಿದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳಿಗೆ ಎಷ್ಟು ನೋವು ನೀಡುತ್ತಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದು ಹೇಳಿದರು.

ಇನ್ನೂ ಒಂದೂವರೆ ವರ್ಷ ಇವರೇ ಇರಬೇಕು. ನಾನು ಕಳೆದ ಒಂದೂವರೆ ವರ್ಷದಿಂದ ಅವರ ಕಚೇರಿಗೆ ಹೋಗಿಲ್ಲ,” ಎಂದು ರೇವಣ್ಣ ತಿಳಿಸಿದರು.ಅಧಿಕಾರಿಗಳೊಂದಿಗೆ ನಡೆಯುತ್ತಿರುವ ವರ್ತನೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಮ್ಮ ಮುಂದೆ ಅಧಿಕಾರಿಗಳನ್ನು ಏಕವಚನದಲ್ಲೇ ಬೈತಾರೆ, ಎಂದು ಆರೋಪಿಸಿದರು.

You cannot copy content of this page

Exit mobile version